ಡಾ. ವಿ.ಕೃ.ಗೋಕಾಕರ ‘ಸಮುದ್ರದಾಚೆಯಿಂದ’ ಪ್ರವಾಸ ಸಾಹಿತ್ಯ ಓದಿದ ಪ್ರಭಾವದಿಂದ ಅಮೆರಿಕ ಸುತ್ತುವ ಹಂಬ ಹೆಚ್ಚಾಗಿ, ಪ್ರವಾಸ ಕೈಗೊಂಡೆ ಎಂದು ಹೇಳಿದ ಲೇಖಕ ನಾಡಿಗ ಕೃಷ್ಣಮೂರ್ತಿ ಅವರು ತಮ್ಮ ಪ್ರವಾಸದ ಅನುಭವವನ್ನು ದಾಖಲಿಸಿದ್ದೇ-ಸಾಗರದಾಚೆ. ಕೃತಿ. ಜೊತೆಗೆ ನಾರಾಯಣ ಸುಬ್ರಾಯ ಹರಡೀಕರ್ ಅವರು ಅಮೆರಿಕೆಗೆ ಹೋಗಿ ಕಷ್ಟಪಟ್ಟು ಓದಿದ್ದನ್ನು ಡಾ. ರಾ.ವೆ. ಕರಗುದರಿಯವರು ಬರೆದ ಪುಸ್ತಕವೂ ತಮಗೆ ಅಮೆರಿಕೆ ಹೋಗಲು ಪ್ರಚೋದಿಸಿತು ಎಂದೂ ಲೇಖಕರು ಹೇಳಿದ್ದಾರೆ.
ಅಮೆರಿಕೆ ಹೋಗುವ ತಮ್ಮ ಹಂಬಲ ಪೂರೈಸಿಕೊಳ್ಳಲು ಹಣ ಹೇಗೆ ಹೊಂದಿಸಿಕೊಂಡರು ಎಂಬ ಬಗ್ಗೆಯೂ ಸುದೀರ್ಘವಾದ ವಿವರಣೆಯೂ ಇಲ್ಲಿದೆ ಹಡಗಿನಲ್ಲಿಯ ದಿನಚರಿಯೊಂದಿಗೆ ಆರಂಭವಾಗುವ ಪ್ರವಾಸ ಸಾಹಿತ್ಯ ನಂತರದ ದಿನಗಳಲ್ಲಿ ಅವರು ಕಂಡುಕೊಂಡ ಅನುಭವವನ್ನು ಸುಂದರವಾಗಿ ವರ್ಣಿಸಿದ್ದಾರೆ. ಗಾಂಧೀಜಿ ಕುರಿತು ಅಮೆರಿಕನ್ನರ ಭಕ್ತಿ ಕುರಿತೂ ವಿವರಿಸಿದ್ದನ್ನೂ ಕಾಣಬಹುದು.
ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ (ಜನನ: 1921) ಡಾ.ನಾಡಿಗ ಕೃಷ್ಣಮೂರ್ತಿ ಜನಿಸಿದರು.ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ನಂತರ ಕಾಲೇಜಿಗೆ ಸೇರಿದರು. ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನಂತರ ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ವಿದೇಶಿ ವಿದ್ಯಾಲಯಗಳಿಗೆ ಅವರು ಸಂದರ್ಶಕ ಅಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ಮಾಡಿದ್ದಾರೆ. ‘ಮಾನಸ ಗಂಗೋತ್ರಿ’ ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ. ಕರ್ನಾಟಕ ಪತ್ರಿಕಾ ಅಕಾಡೆಮಿಗೆ ಪ್ರಥಮ ...
READ MORE