ಲತಾ ಗುತ್ತಿ ಅವರು ಬರೆದ ಪ್ರವಾಸ ಕಥನ ’ರಷ್ಯಾ ಎಂದರೆ ರಷ್ಯಾ’. ರಷ್ಯಾ ಪ್ರವಾಸದಲ್ಲಿ ತಾವು ಕಂಡ, ಅನುಭವ, ಅನುಭಾವಿಸಿದ ಹಲವಾರು ವಿಷಯಗಳ ಕುರಿತು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ರಷ್ಯಾ ಬಗ್ಗೆ ಬರೆಯುತ್ತಾ ಲತಾ, ’ರಷ್ಯಾ ಎಂದರೆ ಟಾಲ್ ಸ್ಟಾಯ್, ಪುಷ್ಕಿನ್,ಡಾಸ್ಟೋವಸ್ಕಿ,ಮ್ಯಾಕ್ಸಿಂ ಗಾರ್ಕಿ,ಅ್ಯಂಟನ್ ಚೆಕಾಫ್,ನಿಕೋಲಾಯ್ ಗೊಗೊಲ್,ಬೋರಿಸ್ ಪಾಸ್ಟರ್‌ನಾಕ್, ಮಾಯ್ಕೋವಾಸ್ಕಿ,ಅಲೆಕ್ಸಾಂಡರ್ ಸೊಲ್ಜೆನಿತ್ಸ್ಯಾನ್......ರಷ್ಯಾ ಎಂದರೆ ಝಾರ್ ಚಕ್ರವರ್ತಿ ಗಳ ಸಾಮ್ರಾಜ್ಯ, ಬೊಲ್‌ಶ್ವಿಕ್ ಕ್ರಾಂತಿಕಾರಿಗಳು, ಯುದ್ಧ, ಸಮಾಜವಾದಿ ಲೆನಿನ್, ಕಮ್ಯುನಿಸ್ಟ್ ಆಡಳಿತ, ಸೊವಿಯತ್ ಒಕ್ಕೂಟ ಪತನ, ಹೊಸ ರಷ್ಯಾದ ಪೆರೆಸ್ಟ್ರೊಯಿಕ್ ಮತ್ತು ಗ್ಲಾಸ್ ನೋಸ್ಟ....-ರಷ್ಯಾ ಎಂದರೆ ಕ್ರೆಮ್ಲಿನ್,ಬ್ಯಾಸಿಲ್ ಕೆಥಡ್ರಲ್ ಚರ್ಚ್‌ಗಳ, ಮೊನಾಸ್ಟರಿಗಳ, ಕಾನ್ವೆಂಟ್‌ಗಳ,ಅರಮನೆಗಳ,ಮ್ಯೂಸಿಯಂಗಳ ,ಕಾರಂಜಿ ಉದ್ಯಾನಗಳ, ಬಿಚ್೯ ವಿಲ್ಲೋ ಮರಗಳ,ವೋಲ್ಗಾ-ನೇವಾ-ಮೊಸ್ಕ್ವಾ ನದಿಗಳ.... ರಷ್ಯಾ ಎಂದರೆ ಬ್ಯಾಲೆ, ಸಕ್೯ಸ್, ಸಂಗೀತ, ಚಿತ್ರಕಲೆ, ಕ್ಲಬ್, ಪಬ್, ಜನಪ್ರಿಯ ವೋಡ್ಕಾ-ಶಾಂಪೇನ್....... ರಷ್ಯಾ ಎಂದರೆ ಹಿಮಾಚ್ಛಾದಿತ ಪ್ರದೇಶ, ಬಯಕ್ಲಾ ಸರೋವರ,ಉರಾಲ್ಸ್ -ಸೈಬೇರಿಯಾ ಪರ್ವತಗಳು,ಹಿಮಪರ್ವತಗಳು, ಹಿಮಪ್ರಾಣಿಗಳು,ತುಪ್ಪಳದ ಕೋಟು- ಕ್ಯಾಪ್ -ಕೈಗವಚಗಳು ....ರಷ್ಯಾ ಎಂದರೆ ಒಲಂಪಿಕ್ ಚಿನ್ನದ ಪದಕಗಳು,ಸ್ಪುಟ್ನಿಕ್ ಖಗೋಳಯಾತ್ರಿ ಯೂರಿ ಗಗಾರಿನ್.....ರಷ್ಯಾ ಎಂದರೆ ಯಂತ್ರೋಪಕರಣಗಳು, ಭೂಗತ ಮೆಟ್ರೋ, ಖನಿಜ ಸಂಪತ್ತು ಇಂತಹ ಹಲವಾರು ಕನಸಿನ ಲೋಕ ನನ್ನೊಳಗೆ ಕೂತಿತ್ತಲ್ಲ’ ಎಂದಿರುವ ಲೇಖಕಿ ರಷ್ಯಾ ಕುರಿತು ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.