ಲೇಖಕ ಪ್ರಕಾಶ್ ಕೆ. ನಾಡಿಗ್ ಅವರ ಪ್ರವಾಸ ಕಥನ-ಯುರೋಪ್ ಯಾನ. ಲೇಖಕರು ಯೂರೋಪಿನಲ್ಲಿ ತಾವು ಕಳೆದ 11 ದಿನಗಳ ಅನುಭವವನ್ನು ಕಟ್ಟಿಕೊಡುವ ಕೃತಿ ಇದು. ಡೆನ್ಮಾರ್ಕ್, ಪ್ಯಾರಿಸ್, ರೋಮ್, ಇಟಲಿ ದೇಶಗಳನ್ನು ಸುತ್ತು ಹಾಕಿದ್ದಾರೆ. ಡೆನ್ಮಾರ್ಕಿನ ಜನರ ಜೀವನ ಶೈಲಿ, ಅವರ ಸಾಂಪ್ರದಾಯ, ಅವರ ರೂಪ ಮೈಕಟ್ಟು ಅಂದ ಚೆಂದಗಳ ಬಗ್ಗೆ ಕೂತುಹಲಕಾರಿಯಾಗಿ ಬರೆದಿದ್ದಾರೆ. ಪ್ಯಾರಿಸಿನಲ್ಲಿ ರಾತ್ರಿ 8:30 ಗಂಟೆಯಾದರೂ ಸೂರ್ಯ ಮುಳುಗಿರುವುದಿಲ್ಲ, ಬೆಳಗಿನ ಜಾವ 4:30ಕ್ಕೆ ಬೆಳಕಾಗಿರುತ್ತದೆ ಇದು ಆ ದೇಶದ ಅಚ್ಚರಿ ಎನ್ನುತ್ತಾರೆ. ಪ್ಯಾರಿಸಿನಲ್ಲಿ ಓಡಾಡಲು ಸಿಗುವ ಸುಲಭ ಬೆಲೆಯ ಮೆಟ್ರೋ ಪಾಸ್, ಸುರಂಗಮಾರ್ಗದ ಮೆಟ್ರೋ, ಮೆಟ್ರೋ ನಿಲ್ದಾಣಗಳಲ್ಲಿ ಅಲಲ್ಲಿ ಚಿಲ್ಲರೆ ಕೊಡುವ ಯಂತ್ರಗಳು, ಭಾರತೀಯ ಶೈಲಿಯ ಊಟ ಸಿಗುವ ಶರವಣ ಭವನ, ಚೊಕ್ಕಟವಾಗಿರುವ ಪ್ಯಾರಿಸಿನ ಬೀದಿಗಳು, ಅಲ್ಲಿಯ ಚರ್ಚುಗಳು, ವಿಶ್ವವಿಖ್ಯಾತ ಐಪೆಲ್ ಟವರ್, ಪೀಸಾ ಗೋಪರ, ಹೀಗೆ ಪ್ಯಾರಿಸಿನ ವಿವರಣೆ ಇದೆ. ದೈವತ್ವವೇ ಮೈವೆತ್ತಿದಂತಿದ್ದ ವ್ಯಾಟಿಕನ್ ಸಿಟಿ, ಅಸಂಖ್ಯಾತ ಚರ್ಚುಗಳು, ಸಂತ ಎಂಜಲೋ ಕೋಟೆ, ರೋಮನ ಪೋರಂ, ಟ್ರೇವಿ ಕಾರಂಜಿ, ಕಲೋಸಿಯಂ ಈ ಸ್ಥಳಗಳ ಪ್ರಾಮುಖ್ಯತೆಯನ್ನು ವರ್ಣಿಸಿದ್ದಾರೆ.
©2024 Book Brahma Private Limited.