ಲೇಖಕ ಪ್ರಕಾಶ್ ಕೆ. ನಾಡಿಗ್ ಅವರು ಮೂಲತಃ ಶಿವಮೊಗ್ಗದವರು. ತಂದೆ ಕೇಶವ ಮೂರ್ತಿ ನಾಡಿಗ್, ತಾಯಿ ಶಾಂತಾ ನಾಡಿಗ್. ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪೂರೈಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಸೂಕ್ಷ್ಮಾಣುಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಮಕೂರಿನ ಔಷಧ ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರವೃತ್ತಿಯಲ್ಲಿ ಲೇಖಕರು, ಅಂಕಣಕಾರರು ಆಗಿದ್ದಾರೆ. ಗುಬ್ಬಚ್ಚಿ ಸಂತತಿಯನ್ನು ಉಳಿಸಿ ಬೆಳೆಸಲು " ಗುಬ್ಬಚ್ಚಿ ಸಂಘ" ಸ್ಥಾಪಿಸಿ, ಮಕ್ಕಳಲ್ಲಿ ಪರಿಸರ ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಮಕ್ಕಳನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.
ಕೃತಿಗಳು: ಗಣೇಶನ ಬೆಂಗ್ಳೂರ್ ಯಾತ್ರೆ, ಪುಟಾಣಿಗಳಿಗಾಗಿ ಪುಟ್ಟ ಕಥೆಗಳು, ಆಡು ಆಟ ಆಡು, ಯೂರೋಪ್ ಯಾನ, ನಿದ್ದೆಗೊಂದು ಕಥೆ, ನಾ ಕಂಡ ಯೂರೋಪ್ ಖಂಡ. ಭಕ್ತರ ಪ್ರಾಣ ಮುಖ್ಯ ಪ್ರಾಣ ( ಭಾರತೀಯ ಸಂಸ್ಕೃತಿಯಲ್ಲಿ ಹನುಮ) . ಕನ್ನಡದ ದಿನಪತ್ರಿಕೆಗಳಲ್ಲಿ ವಿಜ್ಞಾನ, ಆರೋಗ್ಯ, ಪರಿಸರಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳು ಪ್ರಕಟವಾಗಿವೆ.
ಪುಶಸ್ತಿ-ಪುರಸ್ಕಾರಗಳು: ಪುಟಾಣಿಗಳಿಗಾಗಿ ಪುಟ್ಟ ಕಥೆಗಳು ಪುಸ್ತಕಕ್ಕೆ 2013 ರ ಕನ್ನಡ ಸಾಹಿತ್ಯ ಪರಿಷತ್ತಿನ :ಸೀಸು ಸಂಗಮೇಷ ಪ್ರಶಸ್ತಿ, ನಿದ್ದೆಗೊಂದು ಕಥೆ ಕೃತಿಗೆ 2017 ರ ಕನ್ನಡ ಸಾಹಿತ್ಯ ಪರಿಷತ್ತಿನ " ಪಳಕಳ ಸೀತಾರಮ್ ಭಟ್" ದತ್ತಿ ಪ್ರಶಸ್ತಿ, ಯೂರೋಪ್ ಯೂರೋಪ್ ಯಾನ ಹಾಗೂ ನಾ ಕಂಡಾ ಯೂರೋಪ್ ಖಂಡ ಕೃತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ತುಮಕೂರು ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ತುಮಕೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಿದ್ಯಾವಾಚಸ್ಪತಿ ಡಾ ಕವಿತಾ ಕೃಷ್ಣ ಸಾಹಿತ್ಯ ಪ್ರಸಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬೆಂಗಳೂರಿನ ಸಮರ್ಥ ಕನ್ನಡಿಗ ಸಂಸ್ಥೆಯು 2018 ರಲ್ಲಿ ವರ್ಷದ ಸಮರ್ಥ ಕನ್ನಡಿಗ ಪ್ರಶಸ್ತಿ ಹಾಗೂ ಬೆಂಗಳೂರಿನ ಮಿಡಿತ ಫೌಂಡೇಷನ್ , 2019 ರಲ್ಲಿ ‘ ಪರಿಸರ ರಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿದೆ.