ಲೇಖಕಿ ತ್ರಿವೇಣಿ ಶಿವಕುಮಾರ್ ಅವರ ಪ್ರವಾಸ ಕಥನದ ಕೃತಿ ’ಬಹುರೂಪೀ ಭಾರತ’.
ಮಹಾದೇವಿಯಕ್ಕನ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ, ತಂಜಾಪೂರಿನ ಬೃಹದೇಶ್ವರ ಸ್ವಾಮಿ, ಸೌಮ್ಯ ಕಾಳೀ ದೇವಾಲಯ, ಡಾರ್ಜೆಲಿಂಗ್ ನಲ್ಲಿ ತಪ್ಪಿಸಿಕೊಂಡಿದ್ದ ತಂಗಿಯರು, ಮಾನಸ ಸರೋವರ ಮತ್ತು ಕೈಲಾಸ ಪರ್ವತ, ನ್ಯಾಲಂ ಕಡೆಗೆ ಪ್ರಯಾಣ, ಜಹಜ್ ಮಹಲ್ ಮತ್ತು ರಾಣಿ ರೂಪಮತಿ ಬೆಟ್ಟು, ಕಾರ್ಗಿಲ್ ವಿಜಯೋತ್ಸವ, ಹಿಮವಂತನ ಮಡಿಲಲ್ಲಿ ರಾಣಿಖೇತ, ಬುದ್ಧ ಭಗವಾನ್ ಆದ ’ಬುದ್ಧಗಯಾ’ ಮುಂತಾದ ಹಲವಾರು ಪ್ರವಾಸ ಕಥನಗಳನ್ನು ಲೇಖಕಿ ತಮ್ಮ ಅನುಭವದ ಬರಹಗಳಲ್ಲಿ ಓದುಗರಿಗೆ ಪರಿಚಯಿಸಿದ್ದಾರೆ.
ಲೇಖಕಿ ತ್ರಿವೇಣಿ ಶಿವಕುಮಾರ್ ಅವರು 1954 ಫೆಬ್ರವರಿ 23 ರಂದು ತುಮಕೂರಿನಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು “ನಿಸರ್ಗಪ್ರಿಯರ ನಾಡುಗಳಲ್ಲಿ, ಹವಳ ದ್ವೀಪಗಳಲ್ಲಿ, ದಿವ್ಯಮೌನದ ದೇಶಗಳಲ್ಲಿ, ಮಿಣ ಮಿಣ ಚೀಣಾ” ಪ್ರವಾಸ ಕಥನಗಳನ್ನು ಬರೆದಿದ್ಧಾರೆ.. “ಎಂ.ಕೆ. ಜಯಲಕ್ಷ್ಮಿ, ರತ್ನಮ್ಮ ಹೆಗಡೆ, ಸುಲೋಚನಾ ದೇವಿ ಆರಾಧ್ಯ, ಸ್ವರಗಂಗಾ-ಕೃತಿತುಂಗಾ-ಶ್ಯಾಮಲಾ ಜಿ. ಭಾವೆ” ಇವರ ಜೀವನ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ 'ಕಮಲಾ ರಾಮಸ್ವಾಮಿ ದತ್ತಿ' ಬಹುಮಾನ ಪಡೆದಿದ್ಧಾರೆ. ...
READ MORE