ಲೇಖಕಿ ತ್ರಿವೇಣಿ ಶಿವಕುಮಾರ್ ಅವರು 1954 ಫೆಬ್ರವರಿ 23 ರಂದು ತುಮಕೂರಿನಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು “ನಿಸರ್ಗಪ್ರಿಯರ ನಾಡುಗಳಲ್ಲಿ, ಹವಳ ದ್ವೀಪಗಳಲ್ಲಿ, ದಿವ್ಯಮೌನದ ದೇಶಗಳಲ್ಲಿ, ಮಿಣ ಮಿಣ ಚೀಣಾ” ಪ್ರವಾಸ ಕಥನಗಳನ್ನು ಬರೆದಿದ್ಧಾರೆ.. “ಎಂ.ಕೆ. ಜಯಲಕ್ಷ್ಮಿ, ರತ್ನಮ್ಮ ಹೆಗಡೆ, ಸುಲೋಚನಾ ದೇವಿ ಆರಾಧ್ಯ, ಸ್ವರಗಂಗಾ-ಕೃತಿತುಂಗಾ-ಶ್ಯಾಮಲಾ ಜಿ. ಭಾವೆ” ಇವರ ಜೀವನ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ 'ಕಮಲಾ ರಾಮಸ್ವಾಮಿ ದತ್ತಿ' ಬಹುಮಾನ ಪಡೆದಿದ್ಧಾರೆ.