ಖ್ಯಾತ ಲೇಖಕಿ ಡಾ. ಅನುಪಮಾ ನಿರಂಜನ ಅವರ ‘ಅಂಗೈಯಲ್ಲಿ ಯೂರೊ ಅಮೆರಿಕ’ ಕೃತಿಯು ಪ್ರವಾಸಕ ಥನವಾಗಿದೆ. ‘1981 ರಲ್ಲಿ ಯುರೋಪ್ ಮತ್ತು ಅಮೆರಿಕ ಪ್ರವಾಸ ಮಾಡಿ ಬಂದೆ. ಅಲ್ಲಿನ ನೆನಪುಗಳ ಹಂದರವೇ ಈ ಕೃತಿಯಾಗಿದೆ. ಸಾಹಿತ್ಯದ ಮೂಲಕ ಜಗತ್ತಿನ ಎಲ್ಲ ದೇಶಗಳ ಹಾಗೂ ಜನರ ಪರಿಚಯ ನನಗಿದ್ದೇ ಇತ್ತು. ಆದರೆ, ಅವರನ್ನು ಕಣ್ಣಾರೆ ಕಾಣುವ, ಅವರು ಬದುಕುವ ಪರಿಸರವನ್ನು ಅವಲೋಕಿಸುವ, ತನ್ಮೂಲಕ ಆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕೆಂಬ ಆಸಕ್ತಿ. ಈ ಹಿಂದೆ 1975ರಲ್ಲಿ ಬರ್ಲಿನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಭಾಗವಹಿಸಲು ಹೋಗಿದ್ದೆ. ಆಗ ಪೂರ್ವ ಜರ್ಮನಿ, ಪೋಲೆಂಡ್, ಮಾಸ್ಕೋ ಇವೆಲ್ಲಾವುಗಳನ್ನು ಕಾಣುವಂತಹ ಅವಕಾಶ ಒದಗಿತ್ತು. ಈ ಬಾರಿ ಪಶ್ಚಿಮ ಯೂರೋಪ್ ಅಮೆರಿಕಾ ಪ್ರವಾಸ ಹೊರಟವಳು ನಾನೊಬ್ಬಳೇ ಆದುದರಿಂದ ಪ್ರವಾಸಿ ಸಂಸ್ಥೆಯೊಂದರ ನೆರವು ಪಡೆಯಬೇಕಾಯಿತು ಎಂಬುದರ ಜೊತೆಗೆ ಇನ್ನಷ್ಟು ವಿಚಾರಗಳನ್ನು ಲೇಖಕಿ ಇಲ್ಲಿ ವಿಶ್ಲೇಷಿಸುತ್ತಾ ಹೋಗಿದ್ದಾರೆ.
©2024 Book Brahma Private Limited.