ವಂಗ ದರ್ಶನ

Author : ಕೃಷ್ಣಾನಂದ ಕಾಮತ್

Pages 328

₹ 14.00




Year of Publication: 1972
Published by: ಮನೋಹರ ಗ್ರಂಥ ಮಾಲಾ
Address: ಮನೋಹರ ಗ್ರಂಥಮಾಲಾ ಲಕ್ಷ್ಮೀ ಭವನ ಸುಭಾಶ ರೋಡ್‌ ಧಾರವಾಡ 1

Synopsys

ʼವಂಗದರ್ಶನʼ ಕೃತಿ ಲೇಖಕ ಕೃಷ್ಣಾನಂದ ಕಾಮತ್‌ ಅವರ ಪ್ರವಾಸ ಕಥನ. ಕೃತಿಯು ಅನೇಕ ರೇಖಾಚಿತ್ರಗಳನ್ನು ಹೊಂದಿದ್ದು ಪಶ್ಚಿಮ ಬಂಗಾಲದ ಇತಿಹಾಸದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ. ಈ ಕೃತಿಯು 46 ಅಧ್ಯಾಯಗಳನ್ನು ಹೊಂದಿದೆ. ಪರಿವಿಡಿಯಲ್ಲಿ ಹೌರಾಮೇಲ್‌, ಮಹಾನಗರಗಳಲ್ಲಿ, ಲಾಲಗೋಲ ಪೆಸೆಂಜರ್‌,ಸುಖಪ್ರಯಾಣವಾಯಿತೆ, ಪ್ರಥಮ ದರ್ಶನ,ಪರಿಚಯ, ಅಫೀಸಿನಲ್ಲಿ, ಬಂಗಾಲಿ ಕಲಿತೆ, ಭಾಗೀರಥಿಯ ಭೇಟಿ,ಮೀರಾ ಕಂಡಾಗ,ಅಂದು ರವಿವಾರ, ನೆರೆಯವರು,ಕಾಲಿಪದನ, ನಿಷ್ಕ್ರಮಣ, ರಾಮನಗರ, ಉಪದ್ರವಿಗಳು,ನಿರೀಕ್ಷನೆಗೆ ಹೋದಾಗ,ಇಕ್ಷು ಭಕ್ಷಣ,ಮಹಾದೇವ,ಪ್ಲಾಸಿ,ಮುರಶೀದಬಾದ, ಆತಿಥ್ಯ, ಅಡಿಗೆ, ಜೊಂದಾ,ಕಂಪನಿಯಲ್ಲಿ ಗಲಭೆ,ಕ್ರಾಂತಿಯ ಗಾಲಿ ಬೀಸಿತು,ಓ ಕಲಕತ್ತಾ,ದಕ್ಷಿಣೇಶ್ವರ,ಜಡಿಮಲೆ, ಅಂತರಾಳದ ಗುಟ್ಟು, ಈತ ಬಂಗಾಲಿ, ಹೊರನಾಡಿಗೆ ಹೋದವರು, ಹೀಗಿದ್ದರವರು,ರಾಜಿನಾಮೆ, ಬೀಲ್ಕೊಂಡಾಗ,ರಾಜಕೀಯ ರಂಗ,ನಕ್ಸಲೀಯರು,ಮಾರ್ಕ್ಸವಾದಿಗಳು,ರೋಮಾಂಚಕ ಘಟನೆಗಳು, ಕಂಸನೂ ನಕ್ಸಲನಾಗಿದ್ದ, ಕಾರ್ಮಿಕರಲ್ಲಿ ಕೋಲಾಹಲ, ವಿಶ್ವಭಾರತಿ,ಆಟಕೂಟಗಳು: ಬಂಗಾಲ ಮಾದರಿಯಲ್ಲಿ,ಬಂದ್‌ ಬಾಂಗ್ಲಾ ಬಂದ್‌,ಶಿಕ್ಷಣದಲ್ಲಿ ಬಿರುಕು ಮತ್ತು ಬಂಗ್ಲ ಸೋನಾರ ಬಂಗ್ಲ. ಬಂಗಾಲದ ಸ್ಥಳಗಳ ಬಗೆಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books