ಸಾಹಿತಿ ಡಾ. ವೆಂಕಟೇಶ ಮಾಚಕನೂರ ಅವರು ಬರೆದ ಪ್ರವಾಸ ಕಥನ-ಉತ್ತರ ವಿಹಾರ. ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸ ಕಥನವಿದು. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳು ಸೇರಿದಂತೆ ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿವೆ. ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳಾಗಿವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ ಎಂಬುದು ಲೇಖಕರ ಮಾತು.
.ಲೇಖಕ ವೆಂಕಟೇಶ ಮಾಚಕನೂರ ಮೂಲತಃ ಧಾರವಾಡದವರು. ನರ್ಮದೆಯ ನಾಡಿನಲ್ಲಿ, ಉತ್ಕಲ ವಂಗ (ಪ್ರವಾಸ ಕಥನ), ಅಪೂರ್ವ ಪೂರ್ವ, ಉತ್ತರ ವಿಹಾರ ಇತ್ಯಾದಿ ಕೃತಿಗಳು. ...
READ MORE