‘ಉರಿಯ ಬೆಳಕು ಬಂಗಾಳ’ ಲೇಖಕ ಬಿ. ಪೀರ್ ಬಾಷ ಅವರ ಪ್ರವಾಸ ಕಥನ. ಜಗತ್ತಿಗೊಂದು ಕ್ಯೂಬಾ ಹೇಗೋ, ಭಾರತಕ್ಕೆ ಬಂಗಾಳ ಹೊಸ ಹೆಜ್ಜೆ, ವಿಶ್ವಾಸದ ಪ್ರತೀಕ. ಕತ್ತಲೆಯಲ್ಲಿ ಅರಳಿದ ಒಂದು ಬೆಳಕಿನ ಕುಡಿ. ಇಂತಹ ಬೆಳಕನ್ನು ಹೆಕ್ಕಲು ಹೊರಟಿದ್ದು ಕವಿತೆಗಳ ಒಡನಾಡಿ ಬಿ. ಪೀರ್ ಬಾಷ.
ಅಲೆಯುವ ಮನಗಳನ್ನು ಸೆರೆ ಹಿಡಿಯುವ ಪ್ರವಾಸ ಕಥನದ್ದು ವಿಭಿನ್ನ ಲೋಕ, ನೆಲ ಮೀರಲು ಬಯಸುವ ಈ ಕಥಾನಕಗಳು ನಿಂತ ನೀರಾಗಿದ್ದ ಸಮಯದಲ್ಲಿ ಪೀರ್ ಬಾಷ ಒಂದು ಸುಂದರ ಪ್ರವಾಸ ಕಥನ ಬರೆದಿದ್ದಾರೆ ಎನ್ನುತ್ತಾರೆ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ . ಬಂಗಾಳದ ಸಂಸ್ಕೃತಿ, ನೆಲದ ಕಸುವು ಎಲ್ಲವನ್ನು ಈ ಕೃತಿಯಲ್ಲಿ ಲೇಖಕರು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ- ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ, ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...
READ MORE