ಸಾಗರದಾಚೆಯ ನಾಡಿನಲಿ ಎಸ್.ಪಿ. ವಿಜಯಲಕ್ಷ್ಮಿ ಅವರ ಪ್ರವಾಸಕಥನವಾಗಿದೆ. ಮಾಧ್ಯಮಿಕ ಶಾಲಾ ದಿನಗಳಲ್ಲೇ ಬಹುಶಃ ನನ್ನೊಳಗೊಬ್ಬ ಪ್ರವಾಸಿಗ ಜನ್ಮ ತಾಳಿರಬೇಕು. ಸಣ್ಣದೊಂದು ಊರು. ಆಚೀಚೆಯ 20 ಮೈಲಿ ದೂರದ ಹಳ್ಳಿಗಳನ್ನೂ ಕಂಡಿಲ್ಲದವಳ ಕಿವಿಗೆ ಬಿದ್ದ ಒಂದು ಭಾಷಣ ರಷ್ಯಾದ ಕುರಿತು_ ಸದ್ದಿಲ್ಲದೆ ನನ್ನೊಳಗೆ ವಿದೇಶ ಕಾಣುವ ದೊಡ್ಡದೇ ಕನಸೊಂದನ್ನು ತಹತಹವಿಲ್ಲದಂತೆ ಬೆಳೆಸುತ್ತಾ ಬಂದಿರಬೇಕು, ನನಗೂ ಗೊತ್ತಾಗದಂತೆ ಚಿಕ್ಕ ಹುಡುಗಿ. ಆ ಊರಿನಲ್ಲಿ ತೀರಾ ಅಪರೂಪಕ್ಕೆನ್ನುವಂತೆ ಆಗಸದ ಮೇಲ್ಭಾಗದಲ್ಲಿ ಒಮ್ಮೊಮ್ಮೆ ಚುಕ್ಕಿ ಆಕಾರದಲ್ಲಿ ವಿಮಾನ ಒಂದು ಹಾರುವುದನ್ನು, ಅದರ ಪುಟ್ಟ ಶಬ್ದದ ಮೂಲಕ ಕೇಳಿ ಮನೆಯಾಚೆ ಓಡಿ ಬಂದು ಅಂಗಳದಲ್ಲಿ ನಿಂತು ವಿಸ್ಮಯದಿಂದ ಆ ಚುಕ್ಕಿಯಂತಹ ವಿಮಾನ ಕಣ್ಮರೆಯಾಗುವವರೆಗೂ ನೋಡುತ್ತಾ ನಿಲ್ಲುತ್ತಿದ್ದ ವಿಸ್ಮಯದ ದಿನಗಳು ಎದೆಯೊಳಗೆ, 'ಒಮ್ಮೆ ಅದರಲ್ಲಿ ನಾನೂ ಕೂರಬಹುದಾ ಎನ್ನುವ ಆಸೆಯ ಬೀಜವೊಂದನ್ನು ಬಿತ್ತಿಬಿಟ್ಟಿತ್ತು. ಅಲಾಸ್ಕ, ಯುರೋಪ್ ಜಪಾನ್, ಥೈಲ್ಯಾಂಡ್, ಕಾಂಬೋಡಿಯ ಇತ್ಯಾದಿ ದೇಶಗಳ ಪ್ರವಾಸ ಕಥನ ಧಾರಾವಾಹಿಯಾಗಿ ಪ್ರಕಟವಾಗಿ , ಓದುಗರನ್ನು ರಂಜಿಸಿ ಈಗ ಅವು ಪುಸ್ತಕರೂಪವನ್ನು ಪಡೆದವು. ಅವುಗಳಲ್ಲಿ ಮೊದಲ ಪುಸ್ತಕವೇ ಈ, "ಸಾಗರದಾಚೆಯ ನಾಡಿನಲ್ಲಿ" ಎನ್ನುವ ಯೂರೋಪ್ ಪ್ರವಾಸ ಕಥನ.
©2024 Book Brahma Private Limited.