ಡಾ. ಜಯಂತಿ ಮನೋಹರ್ ಹಾಗೂ ಬಿ.ಎಸ್ ಮನೋಹರ್ ಅವರು ದೇಶ-ವಿದೇಶಗಳ ಪರ್ಯಾಟನೆ ಕುರಿತ ಪ್ರವಾಸ ಕಥನ -ಸಾಗರದಾಚೆ ಹರಡಿರುವ ಭಾರತೀಯ ಸಂಸ್ಕೃತಿ. ದಕ್ಷಿಣ ಪೂರ್ವ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಹರಡಿರುವ ಹಾಗೂ ಇನ್ನೂ ಪ್ರಭಾಯುತವಾಗಿಯೇ ಉಳಿದಿರುವ ಭಾರತೀಯ ಸಂಸ್ಕೃತಿಯ ಕುರುಹುಗಳ ಕುರಿತು ಈ ಕೃತಿ ಅಧ್ಯಯನ ಮಾಡುತ್ತದೆ. ಸಂಸ್ಕೃತಿಯ ಎಲ್ಲೆಗಳ ನಡುವಿನ ಮಾಹಿತಿಯ ಮಹಾಪೂರವು ಈ ಕೃತಿಯಲ್ಲಿದೆ. ಇದು ಕೇವಲ ಪ್ರವಾಸ ಕಥನದ ಹಂದರ ಆಗಿರದೇ ಭಾರತೀಯರ ಸುಸಂಸ್ಕೃತಿಯ ನೆಲೆಗಟ್ಟಿನ ಭಾಗಗಳಾದ ಕಲೆ, ಸಾಹಿತ್ಯ, ನಾಟಕ, ನೃತ್ಯ ವಿಚಾರಗಳನ್ನು ವ್ಯಕ್ತಪಡಿಸಿದ ವೇದಿಕೆಯಾಗುತ್ತದೆ ಎಂಬುದು ಲೇಖಕರ ಅಭಿಪ್ರಾಯ.
©2024 Book Brahma Private Limited.