‘ಪ್ರವಾಸದಲ್ಲಿ ಕಂಡದ್ದು ಕಾಣದ್ದು’ ಕೃತಿಯು ಪರಂಜ್ಯೋತಿ ಅವರ ಪ್ರವಾಸ ಸಂಕಲನವಾಗಿದೆ. ಬದುಕಿನ ಜಂಜಡಗಳಿಂದ ದೂರ ಸರಿಸಿ ಮನುಷ್ಯನನ್ನು ಸಂತೃಪ್ತಗೊಳಿಸುವ ಪ್ರವಾಸಗಳು ಎಲ್ಲರಿಗೂ ಇಷ್ಟವೇ. ಹೊಸ ಊರು, ನದಿ, ಬೆಟ್ಟ, ಜಲಪಾತಗಳು, ಕೋಟೆ-ಕೊತ್ತಲುಗಳು, ಪ್ರಾಚೀನ ಗುಡಿ ಗೋಪುರಗಳು, ನಿಸರ್ಗದ ಇನ್ನಿತರೆ ವಿಶಿಷ್ಟ ರಮ್ಯ ತಾಣಗಳು ಅವನನ್ನು ಬದುಕಿನ ಎಲ್ಲ ಆತಂಕ, ದುಗುಡಗಳಿಂದ ದೂರ ಮಾಡಿ ನವಚೈತನ್ಯ ಮೂಡಿಸುತ್ತವೆ. ಇಲ್ಲಿ ಪ್ರವಾಸದಲ್ಲಿ ಕಾಣುವ ವಿಶಿಷ್ಟ ಸ್ಥಳ, ವಸ್ತು, ಸನ್ನಿವೇಶಗಳ ಜೊತೆಗೆ ಕಾಣದ ಸ್ಥಳ ಪುರಾಣ, ಇತಿಹಾಸಗಳ ಸಂಗ್ರಹವೂ ನಡೆಯುತ್ತಾ ಸಾಗಿ ಅದೆಲ್ಲವನ್ನು ಅಕ್ಷರ ರೂಪಕ್ಕಿಳಿಸಿ ದಾಖಲಿಸಿರುವ ಪ್ರವಾಸಗಳ ಸಾರ್ಥಕ ಕೃತಿ ಇದು. ಪ್ರವಾಸಗಳ ಪ್ರತಿಕ್ಷಣ, ಘಟನೆ, ಸನ್ನಿವೇಶವನ್ನು ಕುತೂಹಲದಿಂದ ನೋಡುವ, ಅನುಭವಿಸುವ, ಶೋಧಿಸುವ ಕ್ರಿಯೆಯನ್ನು ನಿರಂತರವಾಗಿ ಆಯ್ದುಕೊಂಡಿರುವುದು ಪ್ರತಿ ಪಯಣವನ್ನು ಸೂಕ್ಷ್ಮಗ್ರಾಹಿಯಂತೆ ದೃಷ್ಟಿಸುತ್ತಾ ದಾಖಲಿಸುತ್ತಾ ಸಾಗುವುದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ.
(ಹೊಸತು ಜನವರಿ 2013, ಪುಸ್ತಕ ಪರಿಚಯ)
ಪ್ರವಾಸವೆಂದರೆ, ಯಾರಿಗೆ ಪ್ರಿಯವಲ್ಲ ಹೇಳಿ ! ಪ್ರವಾಸಗಳು ಮನುಷ್ಯನನ್ನು ಬದುಕಿನ ಜಂಜಡಗಳ ಏಕತಾನತೆಯಿಂದ ಬಿಡುಗಡೆಗೊಳಿಸುತ್ತವೆ. ಹೊಸ ಊರು, ನದಿ, ಬೆಟ್ಟ, ಜಲಪಾತಗಳು, ಕೋಟೆ-ಕೊತ್ತಲುಗಳು, ಪ್ರಾಚೀನ ಗುಡಿ ಗೋಪುರಗಳು, ನಿಸರ್ಗದ ಇನ್ನಿತರೆ ವಿಶಿಷ್ಟ ರಮ್ಯ ತಾಣಗಳು ಅವನನ್ನು ಬದುಕಿನ ಎಲ್ಲ ಆತಂಕ, ದುಗುಡಗಳಿಂದ ದೂರ ಮಾಡಿ ನವಚೈತನ್ಯ ಮೂಡಿಸುತ್ತವೆ. ಪ್ರವಾಸವೆಂದರೆ ನೋಡಿ ಸವಿಯುವುದಷ್ಟೇ ನಡೆಯುತ್ತಿರುವುದಲ್ಲ, ಭೂತ- ವರ್ತಮಾನ- ಭವಿಷ್ಯದ ಸಮೀಕರಣವೂ, ತುಲನಾತ್ಮಕವೂ ಏಕಕಾಲಕ್ಕೆ ನಡೆಯುತ್ತಿರುತ್ತದೆ. ಪ್ರವಾಸದಲ್ಲಿ ಕಾಣುವ ವಿಶಿಷ್ಟ ಸ್ಥಳ, ವಸ್ತು, ಸನ್ನಿವೇಶಗಳ ಜೊತೆಗೆ ಕಾಣದ ಸ್ಥಳ ಪುರಾಣ, ಇತಿಹಾಸಗಳ ಸಂಗ್ರಹವೂ ನಡೆಯುತ್ತಾ ಸಾಗಿ ಅದೆಲ್ಲವನ್ನು ಅಕ್ಷರ ರೂಪಕ್ಕಿಳಿಸಿ ದಾಖಲಿಸಿರುವ ಪ್ರವಾಸಗಳ ಸಾರ್ಥಕ ಕೃತಿ ಇದು. ಪ್ರವಾಸಗಳ ಪ್ರತಿಕ್ಷಣ, ಘಟನೆ, ಸನ್ನಿವೇಶವನ್ನು ಕುತೂಹಲದಿಂದ ನೋಡುವ, ಅನುಭವಿಸುವ, ಶೋಧಿಸುವ ಕ್ರಿಯೆಯನ್ನು ನಿರಂತರವಾಗಿ ಆಯ್ದುಕೊಂಡಿರುವುದು ಪ್ರತಿ ಪಯಣವನ್ನು ಸೂಕ್ಷ್ಮಗ್ರಾಹಿಯಂತೆ ದೃಷ್ಟಿಸುತ್ತಾ ದಾಖಲಿಸುತ್ತಾ ಸಾಗುವುದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ. ಯಾವುದೇ ಸ್ಥಳ ಕಂಡರೂ ಅದರ ಗತವನ್ನು ಕೆದಕುತ್ತಾ ಶೋಧಿಸುತ್ತಾ, ಸಂಗ್ರಹಿಸುತ್ತಾ ಅವೆಲ್ಲವನ್ನು ವಿಮರ್ಶಿಸುತ್ತಾ ಸಾಗುವುದು ಕೃತಿಯ ಶ್ರೇಷ್ಠತೆಗೆ ಸಾಕ್ಷಿ. ಕೃತಿಯಲ್ಲಿ ಹೆಸರಿಸಿರುವ ಸ್ಥಳಗಳು ಪ್ರಸಿದ್ಧವಿರಲಿ, ಇಲ್ಲದಿರಲಿ ಲೇಖಕನ ಕುತೂಹಲ ಸೊಗಸಾಗಿ ಮೂಡಿಬಂದಿದೆ.
-
©2024 Book Brahma Private Limited.