ಶ್ರೀನಿವಾಸ ಜೋಕಟ್ಟೆ ವರ್ತಮಾನಕ್ಕೆ ಬಹುನೆಲೆಗಳಲ್ಲಿ ಸ್ಪಂದಿಸುತ್ತಾ ಬಂದವರು. ಪತ್ರಕರ್ತರಾಗಿ, ಲೇಖಕರಾಗಿ, ಕವಿಯಾಗಿ, ಕತೆಗಾರರಾಗಿ, ಪ್ರವಾಸಿಗರಾಗಿ .....ತಮ್ಮ ಬರಹಗಳನ್ನು ಬೇರೆ ಬೇರೆ ರೀತಿಯ ಪ್ರಯೋಗಕ್ಕೆ ಒಡ್ಡಿಕೊಂಡವರು. “ಆಡು ಮುಟ್ಟದ ಸೊಪ್ಪಿಲ್ಲ, ಜೋಕಟ್ಟೆ ಬರೆಯದ ವಿಷಯಗಳಿಲ್ಲ” ಎನ್ನುವ ಗಾದೆ ಶ್ರೀನಿವಾಸ ಜೋಕಟ್ಟೆಯವರ ಬರಹಗಳಿಗೆ ಚೆನ್ನಾಗಿ ಒಪ್ಪುತ್ತದೆ. ಜೋಕಟ್ಟೆಯೆಂದರೆ ಬರಹಗಳ ಆಣೆಕಟ್ಟು ಒಡೆದಂತೆ. ಅವರು ವಿಷಯದ ಮೇಲೆಯಿಂದ ಸರಾಗವಾಗಿ ಮುಂದು ಹೋಗುತ್ತಾರೆ. ಪತ್ರಕರ್ತರು ಸದಾ ಅವಸರದ ಕುದುರೆಯೇರಿ ಕುಳಿತಿರುವುದರಿಂದ ಅವರ ಹೆಚ್ಚಿನ ಲೇಖನಗಳು ತಕ್ಷಣದ ಅಗತ್ಯವಾಗಿರುತ್ತದೆ. ಜೋಕಟ್ಟೆಯವರ ಪ್ರವಾಸ ಲೇಖನಗಳು ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತವೆ. ಇಲ್ಲಿ ಸಂಕೀರ್ಣತೆಯಿಲ್ಲ, ಸರಳತೆ ಅವರ ನಿರೂಪಣೆಯ ಹೆಗ್ಗಳಿಕೆ. ಬೇರೆ ಬೇರೆ ಕಾರಣಗಳಿಗೆ ಜೋಕಟ್ಟೆಯವರ ಪ್ರವಾಸ ಬರಹಗಳು ನಮ್ಮಲ್ಲಿ ಓದುವ ಉತ್ಸಾಹವನ್ನು ಮೂಡಿಸುತ್ತವೆ ಎಂದು ಕಾರುಣ್ಯ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MORE