ಪೆರುವಿನ ಪವಿತ್ರ ಕಣಿವೆಯಲ್ಲಿ

Author : ನೇಮಿಚಂದ್ರ

Pages 108

₹ 200.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿದ ರೋಮಾಂಚನಕಾರಿ ಚಿತ್ರಣ ಇಲ್ಲಿ ಸಿಗುತ್ತದೆ. ಅಲ್ಲಿ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. 

ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ನೇಮಿಚಂದ್ರ ಅವರು ಇಲ್ಲಿ ಕುತೂಹಲಭರಿತವಾಗಿ ದಾಖಲಿಸಿದ್ದಾರೆ.

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Reviews

ಪ್ರವಾಸದ ಅನುಭವ ನೀಡುವ ಪೆರುವಿನ ಪವಿತ್ರ ಕಣಿವೆ-ಉದಯವಾಣಿ

ನಾನೋದಿದ ಹೊತ್ತುಗೆ ಪೆರುವಿನ ಪವಿತ್ರ ಕಣಿವೆಯಲ್ಲಿ: ಪ್ರಶಸ್ತಿ-ಪಂಜು ಮ್ಯಾಗಸೈನ್

ಪೆರುವಿನ ಪವಿತ್ರ ಕಣಿವೆಯಲ್ಲಿ, ಲೇಖಕಿ ನೇಮಿಚಂದ್ರ-ಸುಚೇತಾ ಕೆ ನಾರಾಯಣ್

ಪೆರುವಿನ ಪವಿತ್ರ ಕಣಿವೆಯಲ್ಲಿ-ಪ್ರಜಾವಾಣಿ

ಪೆರುವಿನ ಪವಿತ್ರ ಕಣಿವೆಯಲ್ಲಿ-ಪುಸ್ತಕ ಪ್ರೇಮಿ

ಹೊಸತು-2004- ಜೂನ್‌

ತಮ್ಮ ಯೂರೋಪ್ ಪ್ರವಾಸದಲ್ಲಿ ಮೇರಿ ಕ್ಯೂರಿಯ ಪ್ರಯೋಗ ಶಾಲೆ, ಡಕಾವ್ಯನ ನಾಝೀ ಕ್ಯಾಂಪ್, ಆನ್ ಫ್ರಾಂಕ್ ಅವಿತಿದ್ದ ಗುಪ್ತ ಸ್ಥಳ ಇವನ್ನೆಲ್ಲ ನೋಡಿಬಂದ ನೇಮಿಚಂದ್ರರ ಈಸಲದ ಆಯ್ಕೆ ಪೆರು ಮತ್ತು ಬ್ರೆಜಿಲ್, ಆಂಡೀಸ್ ಪರ್ವತಗಳ ಮೇಲೆ ಬಸ್ಸಿನಲ್ಲಿ ಸಂಚರಿಸಿ, ಅತಿ ಪುರಾತನ ಇನ್ನಾ ಸಾಮ್ರಾಜ್ಯದ ಪಳೆಯುಳಿಕೆ ಕಂಡು, ವಿಮಾನವೇರಿ ರಹಸ್ಯ ನಾಸ್ಕಾ ಗೆರೆಗಳನ್ನು ನೋಡಿ, ಅಮೆಜಾನ್ ನದಿ ಯಲ್ಲಿ ದೋಣಿಯಲ್ಲಿ ತೇಲಿ ಪಯಣಿಸಿದ ಅದ್ಭುತ ರಮ್ಯ ರೋಮಾಂಚಕ ಪ್ರವಾಸ ಕಥನ. ಅಬ್ಬಾ ! ಇವರು ಭಾರತದಿಂದ ಕೊಂಡೊಯ್ದದ್ದು ಏನನ್ನು ? ಧೈರ್ಯ-ಸಾಹಸಗಳನ್ನು ಮಾತ್ರ . 

Related Books