‘ನೈಲ್' ಸುಬ್ರಾವ ಕುಲಕರ್ಣಿ ಅವರ ಎರಡನೇ ಪ್ರವಾಸ ಕಥನ. 'ನೈಲ್’, ಪ್ರಾಚೀನ ಈಜಿಪ್ಟ್ ವೈಚಿತ್ರ ವಿಚಿತ್ರತೆ, ಅದ್ಭುತಗಳು, ಪೇರೋಗಳ ಸಾಹಸ, ಅಗಾಧಗಳ ಸ್ಮಾರಕಗಳ ಬಗ್ಗೆ ಪ್ರವಾಸಿಯಾಗಿ ಅವರು ಕಂಡ ವಿಶೇಷತೆಯನ್ನು ದಾಖಲಿಸಿದ್ಧಾರೆ.
ಈಜಿಪ್ಟ್ ನ ಭೌಗೋಳಿಕ ವಿಸ್ತಾರ, ನೈಲ ನದಿ, ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ಪುರಾತನ ಕಟ್ಟಡಗಳು ಮಾತ್ರವಲ್ಲ; 6 ಸಾವಿರ ವರ್ಷಗಳ ಹಿಂದಿನ ಮತ್ತು ಜಗತ್ತಿನ ಅದ್ಭುತಗಳಲ್ಲಿ ಒಂದಾದ ಪಿರಾಮಿಡ್ಗಳ ಕುರಿತು ಲೇಖಕರು ತಮ್ಮ ಅನುಭವಗಳಿಗೆ ಪರಿಣಾಮಕಾರಿಯಾಗಿ ಅಕ್ಷರ ರೂಪ ನೀಡಿದ್ದಾರೆ.
ಸಾಹಿತಿ, ಕತೆಗಾರ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಿತರಾದ ಸುಬ್ರಾವ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಿಡೋಣಿಯವರು. ಹೊಸ ಜನರ ಸಂಸ್ಕೃತಿ-ಪರಿಸರವನ್ನು ಅರಿಯುವ ತುಡಿತವಿದ್ದು ಪೂರಕವಾಗಿ ಸುಬ್ರಾವ ಅವರು ದೇಶ ವಿದೇಶಗಳನ್ನು ಭೇಟಿ ನೀಡುತ್ತಾರೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ (ಐ.ಟಿ.ಐ) ವಿವಿಧ ಹುದ್ದೆಗಳಲ್ಲಿ ಸೇವೆಗೈದು ಪ್ರಾಂಶುಪಾಲರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿಯಾದರು. ಸಾಹಿತ್ಯ, ನಾಟಕ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ‘ತೃಪ್ತಿ, ರೇವೆ, ಮಲಪ್ರಭೆ, ಮದನಿಕೆ, ರಾಗದರ್ಬಾರಿ, ಸಂತೆ, ಭಾಗೀರಥಿ ಚಾಳ, ಪುಲ್ವಾಮ’ ಅವರ ಕಥಾ ಸಂಕಲನಗಳು. ‘ಸಾಗರದ ಈಚೆ-ಆಚೆ’ ಅವರ ...
READ MORE