‘ನ್ಯೂಯಾರ್ಕ್ ನಿಂದ ನ್ಯೂಆರ್ಕ್ ಗೆ’ ಆಗುಂಬೆ ನಟರಾಜ್ ಅವರ ಪ್ರವಾಸಿ ಕಥನ. ಅಮೇರಿಕಾ ಸಂಯುಕ್ತ ಸಂಸ್ಥಾನ ಕೇವಲ ನಾಲ್ಕು ಶತಮಾನಗಳ ಕಾಲದ ಇತಿಹಾಸ ಹೊಂದಿದ್ದರೂ, ಅದು ವಿಶ್ವದ ಎಲ್ಲ ದೇಶಗಳ ಜನರ ಮೇಲೆ ತನ್ನ ಇತಿಹಾಸ, ಭಾಷೆ, ಸಂಸ್ಕೃತಿ, ಪ್ರತಿಷ್ಠೆ, ಬಲಿದಾನ, ಬಲಿಷ್ಠತೆ, ಶಕ್ತಿ ಇತ್ಯಾದಿಗಳ ಪ್ರಭಾವ ಬೀರಿದೆ. ಸಾಮ್ರಾಜ್ಯಶಾಹಿ ತತ್ವ, ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ವಿಜ್ಞಾನ, ಕಲೆ, ಸಾಹಿತ್ಯ, ವಾಣಿಜ್ಯ, ಕೈಗಾರಿಕೆ, ಬಾಹ್ಯಾಕಾಶ ಯಾನ, ಸಂಶೋಧನೆ, ಮಹಾನ್ ಶಕ್ತಿಯುತ ಸೈನ್ಯ, ವಲಸೆ ಮುಂತಾದ ವಾಸ್ತವಿಕ ಅಂಶ ಮತ್ತು ಚಲನಶಕ್ತಿಗಳು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅರಳಿ ಬೆಳೆದು, ಅವುಗಳ ಪ್ರಭಾವ ಜಗತ್ತಿನೆಲ್ಲೆಡೆ ಹರಡಿದರ ಪರಿಣಾಮ ಕಾಣಬಹುದಾಗಿದೆ. ಈ ಪುಸ್ತಕದಲ್ಲಿ ಅಮೇರಿಕಾದ ನ್ಯೂ ಇಂಗ್ಲೆಂಡ್ ನ ಐತಿಹಾಸಿಕ ನಗರಗಳ ಪ್ರವಾಸ ಮಾಡಿ, ಕೆಲವು ಪ್ರಮುಖ ಐತಿಹಾಸಿಕ ಸ್ಥಳ ಮತ್ತು ಘಟನಾವಳಿಗಳನ್ನು ಲೇಖಕರು ಸ್ವಾರಸ್ಯಕರವಾಗಿ ಬರೆದಿದ್ದಾರೆ.
©2024 Book Brahma Private Limited.