ಲೇಖಕಿ ಎಚ್. ಎಸ್. ಅನುಪಮಾ ಅವರು ಈಜಿಪ್ಟ್ ಪ್ರವಾಸಕ್ಕೆ ತೆರೆದುಕೊಂಡು, ಅಲ್ಲಿ ತನ್ನದಾಗಿಸಿಕೊಂಡ ಅನುಭವಗಳನ್ನು 'ನೈಲ್ ದಾರಿಗುಂಟ...' ಕೃತಿಯಲ್ಲಿ ದಾಖಲಿಸಿದ್ದಾರೆ. ಚಿತ್ರದ ಮೊದಲ ಅಧ್ಯಾಯದಲ್ಲಿ ಈಜಿಪ್ಟ್ ತನ್ನನ್ನು ಸೆಳೆದ ಬಗೆಯನ್ನು ವಿವರಿಸುತ್ತಾರೆ. ನಾಗರಿಕತೆಯ ತವರು ಈಜಿಪ್ಟ್ ಇಂದು ಬೇರೆ ಬೇರೆ ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಹೀಗಿರುವಾಗ ಈಜಿಪ್ಟನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಅದರ ವರ್ತಮಾನವನ್ನು ಮುಖಾಮುಖಿಗೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಲೇಖಕಿ ಈಜಿಪ್ಟ್ ನ ನೆಲವನ್ನು ತಲುಪುವ ಹಂಬಲಿಕೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆಯೇ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುವ ಮೊದಲು ಈಜಿನ ಇತಿಹಾಸದ ಸಣ್ಣ ಚಿತ್ರಣವನ್ನೂ ಒಂದು - ಅಧ್ಯಾಯದಲ್ಲಿ ನೀಡುತ್ತಾರೆ. ಈಜಿಪ್ಟಿನ ಮೇಲಿನ ಪರಕೀಯ ದಾಳಿಗಳು, ಅದರ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳು ಎಸಗಿದ ದೌರ್ಜನ್ಯಗಳಿಂದ ಹೇಗೆ ಅಲ್ಲಿನ ಬಹುರೂಪಿ ಸಂಸ್ಕೃತಿ ನಾಶವಾಯಿತು ಎನ್ನುವುದನ್ನು ಈ ಅಧ್ಯಾಯದಲ್ಲಿ ಹೇಳುತ್ತಾರೆ. ಹಾಗೆಯೇ ತನ್ನನ್ನು ದೇವರೆಂದು ಘೋಷಿಸಿಕೊಂಡ ಫೆರೋ ಮತ್ತು ಅವನ ವಿರುದ್ಧ ಗುಲಾಮರನ್ನು ಸಂಘಟಿಸಿ ದಂಗೆಯೆದ್ದ ಮೋಸೆಸ್ನ ಬಗ್ಗೆಯೂ ಒಂದು ಸಣ್ಣ ಕತೆಯನ್ನು ಲೇಖಕಿ ಮಂಡಿಸುತ್ತಾರೆ.
©2024 Book Brahma Private Limited.