ಆಫ್ಘಾನಿಸ್ತಾನ! ವಿಭಿನ್ನ ಕಾರಣಗಳಿಗಾಗಿ ಆಫ್ಘಾನಿಸ್ತಾನ ಎಂದಿಗೂ ಜಗತ್ತಿನ ಕೌತುಕ ರಾಷ್ಟ್ರವೇ! ಆಫ್ಘಾನಿಸ್ತಾನ, ಅಲ್ಲಿನ ಸಾಮಾಜಿಕ-ರಾಜಕೀಯ ಪರಿಸ್ಥಿತಿ, ಉಗ್ರಚಟುವಟಿಕೆ ಮತ್ತು ಸಾಲು-ಸಾಲು ಯುದ್ಧಗಳ ಬಗ್ಗೆ ಈಗಾಗಲೇ ಹಲವರು ತಮ್ಮದೇ ರೀತಿಯಲ್ಲಿ ಚಿತ್ರಿಸಿಯಾಗಿದೆ. ಆದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿ ನಿಲ್ಲುವ ಮತ್ತು ಹೊರಜಗತ್ತಿಗೆ ಅಷ್ಟು ಸುಲಭವಾಗಿ ನಿಲುಕದ ಅನೂಹ್ಯ ಲೋಕವೊಂದರ ಚಿತ್ರಣವನ್ನು ತೆರೆದಿಡುವ ವಿಶಿಷ್ಟ ಪ್ರಯತ್ನ ಇದು. ಆಫ್ಘಾನಿನ ಯುದ್ಧಕಾಲದಲ್ಲಿ ನ್ಯಾಟೊ ಮತ್ತು ಅಮೆರಿಕೆಯ ಮಿಲಿಟರಿ ಯುದ್ಧ ಶಿಬಿರಗಳಲ್ಲಿ, ಅಷ್ಟೇ ಅಲ್ಲದೆ ಅಲ್ಲಿನ ಯುದ್ಧಪೀಡಿತ ಅಸುರಕ್ಷಾ ಹೊರವಲಯಗಳಲ್ಲಿ ಸೈನಿಕನಲ್ಲದ ಸಾಮಾನ್ಯ ಕನ್ನಡಿಗನೊಬ್ಬ ಕಳೆದ ಅಸಾಮಾನ್ಯ ಅನುಭವ ಕಥನದ ಸಾರ ಇದು. ಆಫ್ಘಾನಿಸ್ತಾನದ ಅನುಭವವಷ್ಟೇ ಅಲ್ಲದೆ ಒಂದು ಕಾಲದಲ್ಲಿ ಯುದ್ಧಬಭಾದಿತ ಯುಗೋಸ್ಲೋವಿಯಾದ ಅಂಗವಾಗಿದ್ದ ಮೆಸಿಡೋನಿಯ, ಆಗಷ್ಟೇ ಯುದ್ಧದಿಂದ ನಲುಗಿದ್ದ ಇರಾಕ್ ಮತ್ತು ಸೌದಿ-ಯೆಮೆನ್ ಗಡಿಗಳಲ್ಲಿ ಆದ ದಾಖಲಿಸಲರ್ಹ ಕೆಲ ವಿಶೇಷ ಅನುಭವಗಳೂ ಇಲ್ಲಿವೆ.
©2024 Book Brahma Private Limited.