`ಕೊರಕಲಿನ ಜಾಡಿನಲ್ಲಿ’ ಕೃತಿಯು ಮಂಜುನಾಥ್ ಡಿ.ಎಸ್ ಅವರ ಪ್ರವಾಸ ಕಥನ. . ಈ ಕೃತಿಯ ಕುರಿತು ಬೇಲೂರು ರಾಮಮೂರ್ತಿ ಅವರು, ಪ್ರಸ್ತುತ ಕೊರಕಲಿನ ಜಾಡಿನಲ್ಲಿ ಕೃತಿಯೊಳಗೆ ತುಂಬಾ ಕುತೂಹಲ ತರುವ ಅನೇಕ ತಾಣಗಳಿವೆ. ಇವುಗಳಲ್ಲಿ ಸ್ವಲ್ಪ ಅಪರೂಪ ಎನ್ನಬಹುದಾದ ನಕ್ಕಿ ಸರೋವರ, ಜಸ್‌ವಂಥ್ ಥಡಾ, ಜೈಸಲ್ಮೇರ್ ನಗರದ ಮೂಲ ಝರಿ, ಮೇಘಾಲಯದ ಉಮಿಯಂ ಸರೋವರ ತುಂಬಾ ಮನೋಹರವಾಗಿವೆ. ಷಿಲ್ಲಾಂಗ್‌ನ ಉಂಗಟ್ ನದಿಯ ಹೆಸರನ್ನು ತುಂಬಾ ಅಪರೂಪವಾಗಿ ಕೇಳಿದವರಿದ್ದಾರೆ. ಮಾಹೇಶ್ವರ್ ಪಟ್ಟಣದ ವಿವರಗಳು ಸೊಗಸಾಗಿವೆ. ನಮ್ಮ ದೇಶದ ಪ್ರತಿಯೊಂದು ಪಟ್ಟಣವೂ ಒಂದಲ್ಲಾ ಒಂದು ವಿಶೇಷತೆಗೆ ಹೆಸರಾಗಿದೆ. ಆದರೆ ಆ ಪಟ್ಟಣಗಳಿಗೆ ಹೋದವರು ಅವುಗಳನ್ನು ಹೆಕ್ಕಿ ತೆಗೆಯಬೇಕು. ಯಾರಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗಿದ್ದಾರೆ ಎಂದರೆ ಅಲ್ಲಿನ ಪ್ರತಿಯೊಂದು ವಿಷಯಗಳನ್ನೂ ನೋಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಪ್ರದೇಶಕ್ಕೆ ಎಷ್ಟೇ ಜನ ಪ್ರವಾಸ ಹೋದರೂ ಹೊಸದೊಂದು ವಿಷಯ ಸಿಗುತ್ತದೆ. ಹಾಗೆ ಸಿಕ್ಕ ವಿಷಯಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಕೆಲಸವನ್ನು ಸಮರ್ಥವಾಗಿ ಡಿ.ಎಸ್. ಮಂಜುನಾಥ್ ಅವರು ಮಾಡಿದ್ದಾರೆ ಎಂದರೆ ಅವರಿಗೆ ಪ್ರವಾಸದಲ್ಲಿ ಮಾತ್ರ ಆಸಕ್ತಿಯಿಲ್ಲ, ಜೊತೆಗೆ ಅಲ್ಲಿ ಅವರು ಕಂಡ ಮಾಹಿತಿಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಕಳಕಳಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ. ಹಳೇಬೀಡಿನಂಥಾ ಸಣ್ಣ ಊರಿಗೆ ಹೋಗುವವರು ಅಲ್ಲಿನ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯವನ್ನು ನೋಡಿ ಬಂದುಬಿಡುತ್ತಾರೆ. ಆದರೆ ಅಲ್ಲಿ ಇಂಥಾ ಒಂದು ಹುಲಿಕೆರೆಯ ಪುಷ್ಕರಣಿ ಇರುವುದು ಎಷ್ಟು ಜನರಿಗೆ ತಿಳಿದಿದ್ದೀತು ಎಂದಿದ್ದಾರೆ.
©2024 Book Brahma Private Limited.