ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ

Author : ಸಿದ್ಧರಾಮ ಹೊನ್ಕಲ್

Pages 128

₹ 80.00




Year of Publication: 2002
Published by: ಅಲ್ಲಮಪ್ರಭು ಪ್ರಕಾಶನ
Address: ಕಾವ್ಯಾಲಯ,ಲಕ್ಷ್ಮೀನಗರ, ಶಹಾಪುರ-585223.ಯಾದಗಿರಿ ಜಿಲ್ಲೆ
Phone: 9945922151.

Synopsys

ಸಿದ್ಧರಾಮ ಹೊನ್ಕಲ್‌ ಅವರು ಕಥೆ, ಕಾವ್ಯ, ಲಲಿತ ಪ್ರಬಂಧ, ಪ್ರವಾಸ ಕಥನ ಹೀಗೆ ಹಲವು ಪ್ರಕಾರಗಳಲ್ಲಿ ಕೈಯಾಡಿಸಿರುವ ಪ್ರಮುಖ ಬರಹಗಾರ.”ಕನ್ಯಾಕುಮಾರಿಯಿಂದ ಹಿಮಾಲಯದೆಡೆಗೆ’ ಪ್ರವಾಸ ಕಥನದಲ್ಲಿ ಭಾರತದ ದಕ್ಷಿಣದಿಂದ ಉತ್ತರದವರೆಗಿನ ಸಂಸ್ಕೃತಿ, ಭಾಷೆ, ಜನಜೀವನ ಇತ್ಯಾದಿ ವಿಷಯಗಳ ಕುರಿತು ಸುಂದರ ವಿವರಗಳನ್ನು ನೀಡಿದ್ದಾರೆ. ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ 2002ರ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ.

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Related Books