`ಜೀವಿ ಕಂಡ ಅಮೆರಿಕಾ’ ಜೀವಿ ಕುಲಕರ್ಣಿ ಅವರ ಪ್ರವಾಸಕಥನವಾಗಿದೆ. ಆಗಮಿಕರ ನಾಡೆಂದು ಪ್ರಸಿದ್ಧವಾದ ಅಮೆರಿಕಾ ಪ್ರವಾಸ ಕಥನಗಳು ಇಂದು ಬಹುಸಂಖ್ಯೆಯಲ್ಲಿ ಬರುತ್ತಿದ್ದರೂ ಜೀವಿ ಕುಲಕರ್ಣಿ ತಮ್ಮ ಪ್ರವಾಸ ಕಥನದಲ್ಲಿ ನಿರೂಪಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...
READ MOREಹೊಸತು- 2003- ಮೇ
ಆಗಮಿಕರ ನಾಡೆಂದು ಪ್ರಸಿದ್ಧವಾದ ಅಮೆರಿಕಾ ಪ್ರವಾಸ ಕಥನಗಳು ಇಂದು ಬಹುಸಂಖ್ಯೆಯಲ್ಲಿ ಬರುತ್ತಿದ್ದರೂ ಜೀವಿ ಕುಲಕರ್ಣಿ ತಮ್ಮ ಪ್ರವಾಸವನ್ನು ವಿಶಿಷ್ಟ ರೀತಿಯಲ್ಲಿ ನಿರೂಪಿಸಿದ್ದಾರೆ. ಭೂಮಿಯ ಯಾವ ಭಾಗದಲ್ಲಿದ್ದರೂ ನಾವು ಕನ್ನಡಿಗರೆಂದು ಸಾರುವ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನದ ಪ್ರತ್ಯಕ್ಷ ವರದಿ ಹಾಗೂ ಅಲ್ಲಿಯ ಕನ್ನಡಿಗರ ಚಟುವಟಿಕೆಗಳನ್ನು ನೀವಿಲ್ಲಿ ಓದಬಹುದು. ಶ್ರೇಷ್ಠ ದರ್ಜೆಯ ಸಂಸ್ಕೃತಿ ಸಂಪತ್ತು ಅಲ್ಲಿ ವಿಜೃಂಭಿಸುತ್ತಿರುವುದು ವಿಶ್ವದ ಎಲ್ಲೆಡೆಯಿಂದ ಬಂದ ಕೊಡುಗೆ ಎಂದು ಗ್ರಹಿಸಬಹುದು.