‘ಜೀವನ್ಮುಖಿ ತೀಸ್ತಾ’ ಸಿಕ್ಕಿಂ ರಾಜ್ಯದ ಪ್ರವಾಸ ಕಥನ- ಪ್ರವಾಸ ಕಥನವು ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಅದು ಪ್ರವಾಸ ಕೈಗೊಂಡ ಸ್ಥಳದ ವರದಿಯೂ ಅಲ್ಲ. ಪ್ರವಾಸಿಗಳ ಮಾರ್ಗದರ್ಶಿಯೂ ಅಲ್ಲ. ಅದು ಪ್ರವಾಸಿಯ ಸ್ವಾನುಭವದ ರಾಸಾಭಿವ್ಯಕ್ತಿ. ಪ್ರವಾಸ ಸ್ಥಳದ ಭೌಗೋಳಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಅಧ್ಯಯನದ ಜೊತೆ ಪ್ರವಾಸಿಯ ಅನುಭವ ಬೆರೆತುಕೊಂಡ ರಸಪಾಕದಂತಿರುತ್ತದೆ.
ತಮ್ಮ ಸಿಕ್ಕಿಂ ಪ್ರವಾಸದ 15 ದಿನಗಳ ಅನುಭವವನ್ನು ಲೇಖಕರು ಈ ಕೃತಿಯ ಮೂಲಕ ದಾಖಲಿಸಿದ್ದಾರೆ. ಸಿಕ್ಕಿಂ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಮಾಡಿದ ಪ್ರವಾಸದ ವಿವರಗಳನ್ನು ಅಚ್ಚುಕಟ್ಟಾಗಿ ವಿಭಾಗಿಸಿ ನೀಡಿದ್ದಾರೆ. ಹಾಗೆಯೇ ಸಿಕ್ಕಿಂ ರಾಜ್ಯದ ಪೂರ್ವ ಭಾಗದ ಜಿಲ್ಲೆಯಿಂದ ಪ್ರಾರಂಭಿಸಿ ಪ್ರವಾಸದ ಪ್ರಾರಂಭದಲ್ಲೇ ತೀಸ್ತಾ ನದಿಯ ದರ್ಶನದ ಬಗ್ಗೆ ಬರೆಯುತ್ತಾ ಪುಳಕಿತರಾಗಿದ್ದಾರೆ. ಒಟ್ಟಾರೆ ಇದೊಂದು ಉತ್ತಮ ಪ್ರವಾಸ ಕಥನವೆನ್ನಬಹುದು.
©2024 Book Brahma Private Limited.