ಹಳ್ಳಿಹೈದನ ವಿದೇಶ ಪ್ರವಾಸ

Author : ನಿಡಸಾಲೆ ಪುಟ್ಟಸ್ವಾಮಯ್ಯ

Pages 115

₹ 80.00




Year of Publication: 2013
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: # 60, 2D ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ , ಬೆಂಗಳೂರು-560072
Phone: 9740066842

Synopsys

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಪ್ರವಾಸ ಕಥನ-ಹಳ್ಳಿಹೈದನ ವಿದೇಶ ಪ್ರವಾಸ. ಥೈಲ್ಯಾಂಡ್, ಮಲೇಶಿಯಾ, ಹಾಂಗ್ ಕಾಂಗ್ ಹಾಗೂ ಸಿಂಗಾಪುರ ದೇಶಗಳಿಗೆ ಪ್ರವಾಸ ಕೈಗೊಂಡಿದ್ದು,  ಅಲ್ಲಿಯ ಸ್ಥಳಗಳು, ಸ್ಮಾರಕಗಳು, ಅನುಭವಗಳನ್ನು ದಾಖಲಿಸಿದ್ದಾರೆ. ವಿದ್ವಾಂಸ ಪ್ರೊ. ಟಿ.ಆರ್. ಮಹಾದೇವಯ್ಯ ಅವರು ಕೃತಿಗೆ ಬೆನ್ನುಡಿ ಬರೆದು ‘ಲೇಖಕರು ತಮ್ಮ ಪ್ರವಾಸದ ವೀಕ್ಷಕ ವಿವರಣೆಯನ್ನು ನೀಡುತ್ತಾ ಹೋಗಿದ್ದಾರೆ. ಆ ವಿವರಣೆ ಶುಷ್ಕವಾಗದೇ ರಸಮಯವಾಗಿದೆ. ವಿದೇಶ ಪ್ರಯಾಣಕ್ಕೆ ಬೇಕಾದ ಪೂರ್ವ ಸಿದ್ಧತೆ, ಪಾಲಿಸಬೇಕಾದ ರೀತಿ-ರಿವಾಜುಗಳು, ಹೊರದೇಶದ ಊಟ-ವಸತಿ, ಆಚಾರ-ವಿಚಾರ ಮೊದಲಾದುವನ್ನು ಅವರು ರೋಚಕವಾಗಿ ಹೇಳುತ್ತಾ ಹೋಗಿದ್ದಾರೆ. ಭಾರತದದೊಳಗಿನ ತಮ್ಮ ಎರಡು ಪ್ರವಾಸಕಥನಗಳನ್ನು ಹೇಳಿದ್ದು ನಂತರ ವಿದೇಶ ಪ್ರಯಾಣ ಕುರಿತು ಹೇಳಿದ್ದರಿಂದ ದೇಶ-ವಿದೇಶದ ಅನುಭವ ಕಥನಗಳನ್ನು ದಾಖಲಿಸಿದ್ದಾರೆ. ಮುಗ್ಧ ಹಳ್ಳಿ ಹೈದನೊಬ್ಬ ನವನಾಗರಿಕತೆ ತಂದು ಕೊಟ್ಟ ಯಾಂತ್ರಿಕ ಜೀವನದ ಪರಿಣಾಮವನ್ನು ಅದರಲ್ಲೂ ಮಾನವ ಸಂಬಂಧಗಳು ಕಳಚಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೀತಿ ಕಚಗುಳಿ ಇಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ನಿಡಸಾಲೆ ಪುಟ್ಟಸ್ವಾಮಯ್ಯ
(05 February 1951)

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.  ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...

READ MORE

Related Books