‘ಜರ್ಮನಿಯ ಒಡಲಲ್ಲಿ’ ಕೃತಿಯು ಸವಿತಾ ಶ್ರೀನಿವಾಸ್ ಅವರ ಪ್ರವಾಸ ಕಥನವಾಗಿದೆ. ಕೃತಿಯು 1998 ರಲ್ಲಿ ಮೊದಲ ಮುದ್ರಣವನ್ನು ಕಂಡಿದ್ದು, 2021 ರಲ್ಲಿ ಎರಡನೇ ಬಾರಿ ಮುದ್ರಣಗೊಂಡಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಲೇಖಕಿಯು ಯುವ ಜನ ವಿನಿಮಯ ಕಾರ್ಯಕ್ರಮದಡಿ ಜರ್ಮನಿ ದೇಶಕ್ಕೆ 1995ರಲ್ಲಿ ಹೋದಾಗಿನ ನೂತನ ಅನುಭವವನ್ನು ಬಿಡಿಸಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಮೂಲ ಹಂತದಲ್ಲಿ ಗಟ್ಟಿಗೊಳಿಸುವ ನಿಮಿತ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದಿದ್ದಾರೆ. ಪೂರ್ವ ಮತ್ತು ಪಶ್ಚಿಮ ಜರ್ಮನಿ ದೇಶಗಳು ಒಂದಾದ ನಂತರ ಹಲವಾರು ಬದಲಾವಣೆ ಹಾಗೂ ಅಭಿವೃದ್ಧಿಯನ್ನು ಕಂಡಿದ್ದವು. ಪ್ರಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸ್ಟೀನ್ನಿಂದ ಹಿಡಿದು ಹಿಟ್ಲರ್ನ ನಾಜಿ ಆಡಳಿತದ ಕರಾಳ ದಿನಗಳವರೆಗೆ ಹೆಸರುವಾಸಿಯಾಗಿರುವ ಈ ದೇಶದಲ್ಲಿನ ಪ್ರವಾಸದುದ್ದಕ್ಕೂ ಹಳೆಯ ಹಾಗೂ ಹೊಸ ರಾಷ್ಟ್ರದ ಉಗಮದ ನೆನಪುಗಳನ್ನು ಮೆಲುಕು ಹಾಕಲಾಗಿದೆ ಎಂದು ಇಲ್ಲಿ ವಿಶ್ಲೇಷಿತವಾಗಿದೆ.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE