"ವಿದೇಶ ಪ್ರವಾಸದಲ್ಲಿ ಅತಿ ರೋಚಕ ಸೋಜಿಗ ತುಂಬಿದ ಅದ್ಬುತ ಕಾಣುವ ಪ್ರವಾಸವಿದು. ಇಲ್ಲಿ ಇತಿಹಾಸವಿದೆ,ಸಾಹಸವಿದೆ, ಸೌಂದರ್ಯವಿದೆ, ಧಾರ್ಮಿಕವಿದೆ. ವಿಶ್ವದ ಮಹಾನ್ ಕಲೆಗಾರರಿಗೆ, ಸಾಹಿತಿಗಳಿಗೆ, ವಿಜ್ಞಾನಿಗಳಿಗೆ,ರಾಜಕಾರಣಿಗಳಿಗೆ, ಸಾಹಸಿಗಳಿಗೆ ಜನ್ಮ ನೀಡಿದ ತಾಣವಾಗಿದ್ದು, ಇಡಿ ಭೂಖಂಡದ ವಿಶ್ವದ ಸ್ಥಿತಿಗತಿಯಲ್ಲಿ ಬದಲಾವಣೆ ತಂದ ನಾಡಿದು". ಎಂಬ ಮಾತಿನೊಂದಿಗೆ ಯುರೋಪ್ ಪ್ರವಾಸದ ತಮ್ಮ ಅನುಭವವನ್ನು ತಿಳಿಸುತ್ತಾ ಓದುಗರನ್ನು ಯುರೋಪ್ ಪ್ರವಾಸಕ್ಕೆ ಸಜ್ಜು ಗೊಳಿಸುವ ಲೇಖಕಿ ಶ್ರೀಮತಿ ಲಲಿತಾ ಬೆಳವಾಡಿ.ಇದರಲ್ಲಿ ಅವರು 15 ದಿನಗಳ ಯೂರೋಪ್ ಪ್ರವಾಸದ ಅನುಭವಗಳನ್ನು ತುಂಬಾ ಸುಂದರವಾದ ಮತ್ತು ಮರೆಯಲಾರದ ಪ್ರವಾಸದ ಸವಿ ನೆನಪುಗಳನ್ನು ಅಚ್ಚುಕಟ್ಟಾಗಿ ಬರೆದಿದ್ದಾರೆ. "ಅಖಿಲ ಭಾರತ ಕವಯತ್ರಿ ಸಮ್ಮೇಳನ" ಸಂಸ್ಥೆಯು ಯುರೋಪಿನ ಮತ್ತು ಯುಕೆಯ ವಿಶ್ವ ಪ್ರಸಿದ್ಧ ಸ್ಥಳಗಳಲ್ಲಿ ಸಮ್ಮೇಳನವನ್ನು ಏರ್ಪಡಿಸಿದ್ದು,ಈ ಸಂಸ್ಥೆಯಿಂದ ಬೆಂಗಳೂರು ಹಾಗೂ ಕರ್ನಾಟಕದ ರೂವಾರಿಯಾಗಿ ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ಯುರೋಪಿನಲ್ಲಿ ಪ್ರವಾಸಗೈದು,ತಮ್ಮ ಅನುಭವಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ ಲೇಖಕಿಯವರು.
ಲಲಿತ ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು.ತಾಯಿ ಸಂಗೀತಗಾರ್ತಿ ಮತ್ತು ಬರಹಗಾರ್ತಿ,ತಂದೆ ಸರ್ಕಾರಿ ಶಾಲಾ ಶಿಕ್ಷಕರು. ಮದುವೆಯ ನಂತರ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ 16 ವರ್ಷ ವಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಬೆಳೆಸಿಕೊಂಡ ಇವರ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ಪತ್ರ.ನೆನಪಿನ ಕಾಣಿಕೆಗಳು ಪಡೆದಿರುತ್ತಾರೆ. ರಾಷ್ಟ್ರೀಯ ಅಂತರ ರಾಷ್ಟ್ರೀಯ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಸಂಸ್ಥೆಯಲ್ಲಿ pattern member, Executive ಮಾತ್ರವಲ್ಲದೆ ಬೆಂಗಳೂರು ಝೋನ್ ನ ಅಧ್ಯಕ್ಷರೂ ಆಗಿದ್ದಾರೆ.. ನಾಲ್ಕು ವರ್ಷಗಳು ಕರ್ನಾಟಕದ ಇನ್ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನಕ್ಕಾಗಿ, ಗುಲ್ಬರ್ಗ ಬೀದರ್, ಮೈಸೂರು, ...
READ MORE