ಎ.ಕೆ. ಕುಕ್ಕಿಲ ಅವರ ಉಮ್ರಾ ಅನುಭವವನ್ನು ಹೇಳುವ ವಿಭಿನ್ನ ಕೃತಿ “ಎಣ್ಣೆ ಬತ್ತಿ ಲಾಟೀನು', ಉಮಾ-ಪ್ರವಾಸ ಮುಸ್ಲಿಮರ ಪಾಲಿಗೆ ಒಂದು ಧಾರ್ಮಿಕ ವಿಧಿಯಾಗಿದೆ. ಆದರೆ ಒಬ್ಬ ಸೃಜನಶೀಲ ಲೇಖಕನಿಗೆ ಅದು ಕೇವಲ ಒಂದು ಪ್ರವಾಸವಷ್ಟೇ ಅಲ್ಲ. ಹಾಗೆಯೇ ಅದು ಕೇವಲ ಧಾರ್ಮಿಕ ವಿಧಿಯೂ ಅಲ್ಲ. ಆತನಿಗೆ ಅದರಾಚೆಗೆ ನೋಡುವ ಹಲವು ಅವಕಾಶಗಳಿರುತ್ತವೆ. ಈ ಕಾರಣದಿಂದಲೇ ಕುಕ್ಕಿಲ ಅವರ ಕೃತಿ ಒಂದು ಆಧ್ಯಾತ್ಮಿಕ ಅನುಭವ ಮಾತ್ರವಲ್ಲ. ಈ ಕೃತಿ, ಇತಿಹಾಸ, ವರ್ತಮಾನವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತದೆಯಲ್ಲದೆ, ಆ ಮೂಲಕ ಮನುಷ್ಯ ತನ್ನ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ಆಶಯವನ್ನು ಪ್ರಕಟಿಸುತ್ತದೆ. ಹಿರಿಯ ಲೇಖಕ ಬಿ. ಎಂ. ಹನೀಫ್ ಈ ಕುರಿತಂತೆ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ನನ್ನ ಪ್ರಕಾರ ಇದು ಕೇವಲ ಒಂದು ಪ್ರವಾಸ ಕಥನವಲ್ಲ. ಮಂಗಳೂರಿನಿಂದ ಮಕ್ಕಾದವರೆಗೆ ಹೋಗಿ ಬಂದ ನೀವು ಅಲ್ಲಿ ಹೆಜ್ಜೆ ಹೆಜ್ಜೆಗೂ ಇಸ್ಲಾಮಿನ ಹೆಜ್ಜೆ ಗುರುತುಗಳನ್ನು ವಿಶ್ಲೇಷಿಸಿದ ಅತ್ಯಪೂರ್ವ ವೈಚಾರಿಕ ಓದು ಇದು. ಇಸ್ಲಾಮಿ ಇತಿಹಾಸದ ತಳಸ್ಪರ್ಶಿ ಓದಿನ ಹಿನ್ನೆಲೆ ಇದ್ದುದರಿಂದಲೇ ಈ ಓದಿಗೆ ಭಾವುಕ ಸ್ಪರ್ಶದ ಜೊತೆಗೆ ಒಂದು ವೈಚಾರಿಕ ಗಾಂಭೀರ್ಯವೂ ದಕ್ಕಿದೆ.
©2024 Book Brahma Private Limited.