ಲೇಖಕ ಏ.ಕೆ. ಕುಕ್ಕಿಲ ಅವರು ‘ಡೇಟ್ ಫ್ಯಾಕ್ಟ್ ’ ಎಂಬ ಚಾನೆಲ್ ಮೂಲಕ ಚಿರಪರಿಚಿತರು. ಖ್ಯಾತ ಅಂಕಣಕಾರರು ಹಾಗೂ ಪತ್ರಕರ್ತರೂ ಆಗಿರುವ ಕುಕ್ಕಿಲ ಅವರ ಸಾಹಿತ್ಯಿಕ ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಲದ ಎದುರು ಇತಿಹಾಸವನ್ನು ಹರಡಿಕೊಂಡು ತನ್ಮಯತೆ ಮತ್ತು ಭಾವನಾತ್ಮಕತೆಯೊಂದಿಗೆ ಒಂದು ಪ್ರವಾಸವನ್ನು ಹೇಗೆ ಕಟ್ಟಿಕೊಡಬಹುದು ಎಂಬುದನ್ನು ಕುಕ್ಕಿಲ ಅವರು ತಮ್ಮ ’ಎಣ್ಣೆ ಬತ್ತಿದ ಲಾಟೀನು’ ಕೃತಿಯಲ್ಲಿ ಚಿತ್ರಿಸಿದ್ದಾರೆ. ಸರಸ-ಸಲ್ಲಾಪ, ವೈರಸ್ ಹಾಗೂ ಅಮ್ಮನ ಕೋಣೆಗೆ ಏಸಿ ಅವರ ಪ್ರಕಟಿತ ಕೃತಿಗಳು.