1974ರಲ್ಲಿ ಬೀchi ಅವರು ಬರೆದ ಪ್ರವಾಸ ಕಥನ ’ದೇವರಿಲ್ಲದ ಗುಡಿ’. ಆಫ್ರೋ- ಏಷ್ಯನ್ ಬರಹಗಾರರ ಸಮ್ಮೇಳನದ ಭಾರತೀಯ ಪ್ರತಿನಿಧಿಯಾಗಿ ರಷ್ಯಾಕ್ಕೆ ತೆರಳಿದಾಗ ಅಲ್ಲಿನ ಅನುಭವಗಳನ್ನು ಕಥನ ರೂಪಕ್ಕೆ ಇಳಿಸಿದ್ದರು ಅವರು. ’ದೇವರಿಲ್ಲದ ಗುಡಿ’ ಎನ್ನುವುದಕ್ಕಿಂತ ರಷ್ಯಾ ಬಗೆಗೆ ಉತ್ತಮ ರೂಪಕ ಬೇಕೆ? ಪ್ರವಾಸಕ್ಕೆ ಹೋಗುವುದಾಗಿ ಹೇಳಿದಾಗ ಅವರ ಶ್ರೀಮತಿಯವರು ’ರಸಿಯಾ! ಆ ಸುಡುಗಾಡು ದೇಶಕ್ಕೆ ಯಾಕ್ರೀ ಹೋಗೀರಿ ? ಆ ದೇಶದಾಗ ದೇವರು ಇಲ್ಲವಂತ !??’ ಎಂದಿದ್ದರು. ಆ ಮಾತೇ ತಮ್ಮ ಪ್ರವಾಸ ಕಥನದ ಶೀರ್ಷಿಕೆಯಾಯಿತು. ರಷ್ಯಾಕ್ಕೂ ಇತರ ದೇಶಗಳಿಗೂ ಇರುವ ವ್ಯತ್ಯಾಸ, ಅಲ್ಲಿ ಸಾಹಿತಿಗಳೊಂದಿಗೆ ನಡೆಸಿದ ಚರ್ಚೆ, ಪ್ರವಾಸದ ತಯಾರಿ ಮತ್ತಿತರ ಅಂಶಗಳು ಇಲ್ಲಿ ಚರ್ಚೆಯಾಗಿವೆ.
©2024 Book Brahma Private Limited.