ದೇಗುಲಗಳ ದಾರಿ ಸಂಪುಟ- 5

Author : ಕೆಂಗೇರಿ ಚಕ್ರಪಾಣಿ

Pages 184

₹ 250.00




Year of Publication: 2022
Published by: ಭಾರತಿ ಪ್ರಕಾಶನ
Address: ಸರಸ್ವತೀಪುರಂ, ಮೈಸೂರು-570 009

Synopsys

‘ದೇಗುಲಗಳ ದಾರಿ’ ಸಂಪುಟ-5 ಕೆಂಗೇರಿ ಚಕ್ರಪಾಣಿಯವ ಪ್ರವಾಸ ಕಥನವಾಗಿದೆ. ಇದಕ್ಕೆ ಚಿಂತಾಮಣಿ ಕೊಡ್ಲೆಕೆರೆ ನಾಗೇಂದ್ರ ಅವರ ಮುನ್ನುಡಿ ಬರಹವಿದೆ. "ದೇಗುಲಗಳ ದಾರಿ"ಯ ಈ ಐದನೇ ಸಂಪುಟವು ಸ್ವಲ್ಪ ತಡವಾಗಿ ಬೆಳಕು ಕಾಣುತ್ತಿದೆ - ನಮ್ಮ ಹಿಂದಿನ ಸಂಪುಟ ಪ್ರಕಟವಾಗಿ ನಾಲ್ಕು ವರ್ಷಗಳೇ ಕಳೆದು ಹೋದವು, ವಿಶ್ವವನ್ನೇ ವಿಹ್ವಲಗೊಳಿಸಿದ ವೈರಾಣು ನಮಗೂ 'ದಾರಿ'ಗಾಣದಂತೆ ಮಾಡಿತು.

ಇದೀಗ ಮತ್ತೆ ನಮ್ಮ ಪ್ರವಾಸಗಳು ಆರಂಭಗೊಂಡಿವೆ. ಮೂಲತಃ ಈ ಪ್ರವಾಸಗಳ ವಿವಿಗಳಿಗಾಗಿ ನಮ್ಮ ಇತಿಹಾಸತಜ್ಞ, ಛಾಯಾಚಿತ್ರಗ್ರಾಹಕ ಮಿತ್ರ ಶ್ರೀ ಚಕ್ರಪಾಣೆಯರ ಬೀಖನ ಕಾರ್ಯವು ಆರಂಭಗೊಳ್ಳುತ್ತದೆ. ಇವೇ ಕೈಹೊತ್ತಗೆಗಳು ಮುಂದಿನ ದಿನಗಳಲ್ಲಿ ಪ್ರವಾಸ ಕೈಕೊಳ್ಳುವವರಿಗೆ ತೋರು ಗಂಬಗಳಾಗಿ, ಅಭ್ಯಾಸಿ ಗಳಿಗೆ ನಮ್ಮ ಕನ್ನಡ ನಾಡಿನ ಹಳ್ಳಿ, ಹಳ್ಳಿಗಳಲ್ಲಿರುವ ಹಳೆಯ ದೇವಾಲಯಗಳ ಮಹಿಮೆ. ಮಾತ್ರ ಐತಿಹಾಸಿಕ ಹಿನ್ನೆಲೆ, ಕಲಾ ಸೌಂದರ್ಯದ ಕಿರುಮಾಹಿತಿ ಮತ್ತು ಸುಂದರ ಚಿತ್ರಗಳನ್ನೊಳಗೊಂಡ ಆಕರಗ್ರಂಥಗಳಾಗಿ ರೂಪುಗೊಳ್ಳುತ್ತವೆ.

ಇದು ನಮ್ಮ ಈ ಸಂಪುಟಗಳು ಆಕೃತಿ ಪಡೆಯುವ ವಿಧಾನ. ಇಂಥ ಪುಸ್ತಕಗಳಿಂದ ಸಿಗುವ ಮಾಹಿತಿಯ ಕುರಿತು ಓದುಗ ವರ್ಗದಲ್ಲಿ ಎಷ್ಟು ದೊಡ್ಡ ಕುತೂಹಲ ಇದೆ ಎಂಬುದು ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತದೆ. ತಮ್ಮ ಊರಿನ ಮತ್ತು ಆಸುಪಾಸಿನ ಊರುಗಳ ದೇವಾಲಯಗಳ ಕುರಿತು ತಮಗೆ ಈ ಪುಸ್ತಕ ಓದುವ ಮೊದಲು ಏನೇನೂ ತಿಳಿದಿರಲಿಲ್ಲ ಎಂಬಂಥ ಅಚ್ಚರಿಯ ಉದ್ಧಾರಗಳನ್ನು ಅನೇಕ ಸಲ ಕೇಳಿದ್ದೇವೆ.

ಇದುವರೆಗೂ ಯಾರೂ ಗಂಭೀರವಾಗಿ ಪ್ರವೇಶಿಸಿರದ ಒಂದು ದೊಡ್ಡ 'ಸಾಂಸ್ಕೃತಿಕ ಅಗತ್ಯ'ವನ್ನು ಈ ಸಂಪುಟಗಳು ತಮ್ಮದೇ ರೀತಿಯಲ್ಲಿ ಪೂರೈಸುತ್ತಿವೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಕೆಂಗೇರಿ ಚಕ್ರಪಾಣಿ

ಪ್ರಾಚೀನ ದೇಗುಲಗಳ ಬಗ್ಗೆ ಇಂದಿನ ದಿನದಲ್ಲಿ ಹೇಳುವಾಗ ಕನ್ನಡಿಗರಿಗೆ ಥಟ್ ಅಂತ ನೆನಪಾಗುವ ಹೆಸರು ಕೆಂಗೇರಿ ಚಕ್ರಪಾಣಿ. ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ದೇಗುಲಗಳನ್ನೆಲ್ಲಾ ಸುತ್ತಿ ಅದರ ದೃಶ್ಯದರ್ಶನ ಸೌಭಾಗ್ಯವನ್ನು ಎಲ್ಲ ಕನ್ನಡಿಗರಿಗೆ ಮುಕ್ತವಾಗಿ ನೀಡುತ್ತಿರುವ ಕೆಂಗೇರಿ ಚಕ್ರಪಾಣಿಯವರದು ಸರಳ ಸಜ್ಜನಿಕೆಯಿಂದ ಕೂಡಿದ ವಿಶಾಲ ಮನಸ್ಸು. ಬಿ ಎಸ್ ಎನ್ ಎಲ್ ಕೇಂದ್ರದಲ್ಲಿ ದೂರಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಕೆಂಗೇರಿ ಚಕ್ರಪಾಣಿ ಅವರಿಗೆ ಈ ಹವ್ಯಾಸ ತಮ್ಮ ಸಹೋದ್ಯೋಗಿಗಳೊಂದಿಗೆ ವಿವಿಧ ಪ್ರಾಚೀನ ದೇಗುಲಗಳಿರುವ ಊರುಗಳಿಗೆ ಪ್ರವಾಸ ಹೋಗುವುದರ ಮೂಲಕ ಮೊದಲ್ಗೊಂಡಿತು. ಹೀಗೆ ಮೊದಲ್ಗೊಂಡ ಪ್ರವಾಸ ಚಕ್ರಪಾಣಿ ...

READ MORE

Related Books