’ಚೆ’ ಎಂದೇ ಜಗತ್ತಿನಾದ್ಯಂತ ಜನಪ್ರಿಯನಿರುವ ಚೆ ಗೆವಾರಾ ಕ್ರಾಂತಿಯ ಸಂಕೇತ. ಅರ್ಜೇಂಟಿನಾದ ಈ ಯುವಕ ಪ್ರಭುತ್ವದ ವಿರುದ್ಧ ಸೆಣಸಾಡಿ ಜಗತ್ತಿಗೇ ಮಾದರಿಯಾದ. ಹೋರಾಟ-ಪ್ರತಿಭಟನೆಗೆ ಪರ್ಯಾಯ ನಾಮದಂತಿರುವ ಚೆ ಪ್ರಭುತ್ವದ ಗುಂಡಿಗೆ ಬಲಿಯಾದಾಗ ಕಿಸೆಯಲ್ಲಿ ನೆರೂಡಾ ಪದ್ಯಗಳ ಪುಸ್ತಕ ಇತ್ತು. ಸಮಸಮಾಜದ ಕನಸು ಕಾಣುತ್ತ ಕಾವ್ಯ ಪ್ರೀತಿ ಹೊಂದಿದ್ದ ಚೆ ಬದಲಾವಣೆ-ಬಿಡುಗಡೆಯ ದ್ಯೋತಕ. ಚೆ ಹುಟ್ಟಿ ಬೆಳೆದು- ಹೋರಾಟ ನಡೆಸಿದ ನೆಲದಲ್ಲಿ ಓಡಾಡಿ-ಪ್ರವಾಸ ಮಾಡಿದ ಲೇಖಕಿ ಅಲ್ಲಿನ ಅನುಭವವನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಓದಬಹುದಾದ ಪ್ರವಾಸ ಕಥನ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE