ಈಗಾಗಲೇ ಒಟ್ಟು 9ನೇ ಮುದ್ರಣ ಕಂಡಿರುವ ಪ್ರವಾಸ ಕಥನವಾದ ’ಕಾವೇರಿಯಿಂದ ಮೇಕಾಂಗಿಗೆ’ ಕೃತಿಯ ಲೇಖಕಿ ಸುಧಾಮೂರ್ತಿ. ’ನನ್ನ ಹುಟ್ಟೂರು ಶಿಗ್ಗಾವಿ. ಹಾವೇರಿ ಜಿಲ್ಲೆಯ ಚಿಕ್ಕ ಊರು....’ ಎಂದು ಆರಂಭವಾಗುವ ಈ ಕಥನವು ವಿಶ್ವದ ವಿವಿಧ ದೇಶಗಳನ್ನು ಸುತ್ತಾಡಿ, ನಂತರ ಬರೆಹಕ್ಕಿಳಿಸುವ ಲೇಖಕರು, ಕಥನದ ಕೊನೆಯಲ್ಲಿ ’ನಾವು ಎಷ್ಟೇ ಓದಲಿ, ಎಷ್ಟೇ ಚಿತ್ರ ನೋಡಲಿ, ನಿಜವಾಗಿ ಈ ಅನುಭವವೇ ಬೇರೆ. ನನ್ನ ಲೇಖನಿ, ನನಗೆ ತಿಳಿದ ಪದಕೋಶದಿಂದ ನಿಜವನ್ನು ಬಣ್ಣಿಸಲು ಅಸಮರ್ಥವಾಗಿದೆ’ ಎನ್ನುವ ಮೂಲಕ ಪ್ರವಾಸ ಕಥನವು ಎಷ್ಟೇ ಪ್ರಬಲವಾಗಿ-ಪ್ರಬುದ್ಧವಾಗಿ ಬರೆದರೂ ಅದು ಅಪೂರ್ಣವೇ ಎಂಬ ಸತ್ಯವನ್ನು ಹೇಳಲು ಹಿಂಜರಿದಿಲ್ಲ. ಅದು ಲೇಖಕನಿಗಿರಬೇಕಾದ ಪ್ರಾಮಾಣಿಕ ಬದ್ಧತೆ ಮಾತ್ರವಲ್ಲ; ಕೃತಿಯು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎಂಬುದಕ್ಕೂ ಸೂಚಕವಾಗಿರುತ್ತದೆ.
©2024 Book Brahma Private Limited.