ವಿಶ್ವದರ್ಶನ ಮಾಲಿಕೆಯ ಮೂಲಕ ವಿವಿಧ ದೇಶಗಳ ಪರಿಚಯ ಮಾಡುವ ಪ್ರಯತ್ನವನ್ನು ಡಿ.ಎಸ್. ಲಿಂಗರಾಜು ಅವರು ಮಾಡಿದ್ದಾರೆ. ಈ ಕೃತಿಯಲ್ಲಿ ಲೇಖಕರು ಟಿಬೆಟ್, ಮ್ಯಾನ್‌ಮಾರ್ ಹಾಗೂ ಶ್ರೀಲಂಕಾ ದೇಶಗಳ ಪರಿಚಯ ಮಾಡಿದ್ದಾರೆ. ಪ್ರವಾಸ ಮಾಡಲು ಬಯಸುವವರಿಗೆ ಅನುಕೂಲಕರವಾದ ಕೃತಿ ಇದಾಗಿದೆ. ಈ ಕೃತಿಯಲ್ಲಿ ಬುದ್ದನ ನಾಡಿನ ಸಾಮಾಜಿಕ, ಭೌಗೋಳಿಕ ಹಾಗೂ ಭಾಷೆ-ಸಂಸ್ಕೃತಿಗೆ ಸಂಬಂಧಿಸಿ ಮಾಹಿತಿ ನೀಡಲಾಗಿದೆ. ಚೀನಾದ ಸರ್ವಾಧಿಕಾರಿ ಕಪಿಮುಷ್ಟಿಯಲ್ಲಿ ಸಿಕ್ಕಿ ತುಳಿತಕ್ಕೊಳಗಾಗಿ ನರಳುತ್ತಿರುವ ಟಿಬೆಟ್ ದೇಶದ ಆಕ್ರಂದನವಿದೆ. ಶಾಂತಿ, ಅಹಿಂಸೆ ಬೋಧಿಸಿದ ಬುದ್ಧನ ನಾಡುಗಳೆಲ್ಲಾ ಇಂದು ಹಿಂಸೆಯಿಂದ ತಲ್ಲಣಿಸುತ್ತಿರುವುದರ ಬಗ್ಗೆ ಲೇಖಕರು ಬರೆದಿದ್ದಾರೆ.
ಲೇಖಕ ಡಿ.ಎಸ್. ಲಿಂಗರಾಜು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು, ಮಾಯಸಂದ್ರದವರು. ತಂದೆ- ಡಿ.ಎಸ್. ಶಿವರಾಜೇಗೌಡ, ತಾಯಿ- ಬಿ.ಕೆ ಜಯಮ್ಮ. ಮಾಯಸಂದ್ರ, ತುರುವೇಕೆರೆ, ಕೋಲಾರ ಮತ್ತು ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ (1985), ಕೆಲಕಾಲ ಕುಣಿಗಲ್ ತಾಲೂಕು ಎಡೆಯೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ. ನಂತರ ಕೆಎಎಸ್ ಗೆಜೆಟೆಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 1991 ರಿಂದ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ, ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಕಾಲಿಸುತ್ತಿದ್ದಾರೆ. ತುಷಾರ ಮಾಸ ಪತ್ರಿಕೆಯ ದೇಶ-ವಿದೇಶಗಳ ಪರಿಚಯ ಮಾಲೆಯಲ್ಲಿ ಸುಮಾರು ...
READ MORE