ಲೇಖಕ ಬಿ.ಎಸ್. ತಲ್ವಾಡಿ ಅವರು ಈಜಿಪ್ತ್ ಗೆ ಕೈಗೊಂಡ ಪ್ರವಾಸ ಕಥನವಿದು-ಬೆರಗಿನ ಈಜಿಪ್ತ್. ಪ್ರಾಚೀನ ನಗರಗಳ ಇತಿಹಾಸ ಈಜಿಪ್ತ್ ಗೆ ಇದೆ. ಜಗತ್ತಿನ ಅದ್ಭುತಗಳ ಪೈಕಿ ಪಿರಾಮಿಡ್ ಗಳು ಈಜಿಪ್ತ್ ನಲ್ಲಿವೆ. ನಾಗರಿಕತೆ-ಸಂಸ್ಕೃತಿ ಬೆಳವಣಿಗೆಯಲ್ಲೂ ಈಜಿಪ್ತ್ ಗೆ ಶ್ರೀಮಂತ ಹಾಗೂ ಬೆರಗಿನ ಇತಿಹಾಸವಿದೆ. ಲೇಖಕರು, ಈಜಿಪ್ತ್ ನ್ನು ವಿವಿಧ ಆಯಾಮಗಳಿಂದ ವೀಕ್ಷಿಸಿ, ತಮ್ಮದೇ ನೆಲೆಯಲ್ಲಿ ವಿಶ್ಲೇಷಿಸಿದ ಬರಹವೇ ಈ ಕೃತಿ.
ಡಾ.ಬಿ.ಎಸ್.ತಲ್ದಾಡಿ ಅವರು ಮೂಲತಃ ಮೈಸೂರು ಜಿಲ್ಲೆಯ ಚಾಮರಾಜನಗರದ ಬಳಿಯ ಮಲೆ ಮಹದೇಶ್ವರದವರು. ಮಲೆಮಹದೇಶ್ವರ ಸೇರಿದಂತೆ ಒಳಗಿರಂಗನ ಬೆಟ್ಟಗಳ ಪರಿಸರದ ಕಾಡು ಕಣಿವೆ. ಗುಡ್ಡ ಸುತ್ತಾಡಿ, ಸೋಲಿಗರು, ಬಡಗರು. ಲಂಬಾಣಿಗರು, ಕಾಡಾರರು ಕಾಡುಕುರುಬರು ಹೀಗೆ ಸಹಜವಾಗಿ ಬೆರೆತು ಅವರ ಬದುಕಿನ ವಿವಿಧ ಮಗ್ಗಲುಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿದವರು. ಸೋಲಿಗರ ಸಮಗ್ರ ಜೀವನದ ‘ಗುಂಗರು ಕಣಿವೆ ’ (1982) ಕಾದಂಬರಿ ರಚಿಸಿದ್ದಾರೆ. ಕಥೆ-ಕವನ, ವಿಮರ್ಶೆ, ಜೀವನ ಚರಿತ್ರೆ ಇತ್ಯಾದಿ ಪ್ರಕಾರದಲ್ಲೂ ಲೇಖನಗಳನ್ನು ಬರೆದಿದ್ದಾರೆ. ...
READ MORE