‘ಬಹುಮುಖಿ ಅಮೇರಿಕಾ’ ಕೃತಿಯು ಸಿರಿಗಂಧ ವಿ. ಶ್ರೀನಿವಾಸ ಮೂರ್ತಿ ಅವರ ಪ್ರವಾಸ ಕಥನವಾಗಿದೆ. ಈ ಕೃತಿಯು ಎರಡು ಯಾನಗಳ ಕಥನವಾಗಿದೆ. ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣದಲ್ಲಿ ಸುಟ್ಟು ಬೂದಿಯಾದ ಕರಿಬೇವಿನ ಕತೆಯಿಂದ ಆರಂಭವಾಗುವ ಪ್ರವಾಸ ಕಥನದಲ್ಲಿ ಅಮೆರಿಕವನ್ನು ಹಲವು ಮಜಲುಗಳಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಕೃತಿಯು ಸಾಮಾನ್ಯ ಪ್ರವಾಸಿಗನ ರೀತಿಯಲ್ಲಿ ಪ್ರವಾಸವನ್ನು ಇಟ್ಟುಕೊಳ್ಳದೇ ಪ್ರತಿ ಘಟನೆಯನ್ನೂ ಸ್ಥಳವನ್ನೂ ಅನುಭವಿಸಿ ಲೇಖಕರು ಅಕ್ಷರಗಳಿಗಿಸಿದ್ದಾರೆ. ಈ ಕೃತಿಯಲ್ಲಿ ಅನೇಕ ಕಥನಗಳಿವೆ, ಕ್ಯಾಮೆರಾ ಕಣ್ಣಿಂದ ಸೆರೆಹಿಡಿದಿರುವ ಚಿತ್ರಣಗಳು ಇಲ್ಲಿವೆ.
©2024 Book Brahma Private Limited.