ಬದುಕಿನ ತಿರುವುಗಳು

Author : ಸಿ.ಆರ್‌. ಕೃಷ್ಣರಾವ್

Pages 192

₹ 200.00




Year of Publication: 2019
Published by: ಎಂ.ಎಸ್ . ಕೃಷ್ಣನ್ ಸ್ಮರಣ ಸಂಸ್ಥೆ
Address: # 5, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001

Synopsys

ಲೇಖಕ ಸಿ. ಆರ್ ಕೃಷ್ಣರಾವ್ ಅವರ ’ ಬದುಕಿನ ತಿರುವುಗಳು’ ಕೃತಿ ಪ್ರವಾಸ ಕಥನವಾಗಿದೆ. ಸಿ. ಆರ್ .ಕೆ ಅವರ ಬದುಕಿನ ತಿರುವುಗಳು ಸಣ್ಣ ತಿರುವುಗಳೇನಲ್ಲ. ’ಸೋವಿಯತ್ ದೇಶ’ ಪತ್ರಿಕೆಯಲ್ಲಿ ಕೆಲಸ ಮಾಡಲು ಮದ್ರಾಸ್ ಗೆ ಹೋದವರು ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹೊರನಾಡ ಕನ್ನಡಿಗರ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ.

ಅಲ್ಲಿಂದ ಬಂದನಂತರ ಅವರ ವಿದೇಶ ಪ್ರವಾಸದ ಅನುಭವಗಳು, ಆ ದೇಶಗಳ ಆಂತರಿಕ ವ್ಯವಸ್ಥೆಯನ್ನು ತಮ್ಮ ಒಳನೋಟಗಳಿಂದ ಸಾದರಪಡಿಸಿದ್ದಾರೆ. ಹೀಗೆ ಸಿ. ಆರ್. ಕೆ ಅವರ ’ ಬದುಕಿನ ತಿರುವುಗಳು’ ಕೃತಿ ವಿವಿಧ ಕ್ಷೇತ್ರಗಳ ಅಧ್ಯಯನದ ಆನಂದವನ್ನು ಕೊಡುತ್ತದೆ. ಅಪಾರ ಮಾಹಿತಿಗಳ ಕಣಜವಾದ ಈ ಹಿರಿಯ ಜೀವ ಇಂದಿಗೂ ’ ಹೊಸತು’ ಪತ್ರಿಕೆಯ ಕಾರ್ಯಲಯಕ್ಕೆ ಬಂದು ನಮಗೆಲ್ಲ ಮಾರ್ಗದರ್ಶನ ಮಾಡುತ್ತಾರೆ. ಪತ್ರಿಕೆಗೆ ನಿರಂತರವಾಗಿ ಬರೆಯುತ್ತಾರೆ. ತಮ್ಮ ಬದುಕಿನ ಹಲವಾರು ಘಟನೆಗಳನ್ನು, ವಿದ್ಯಮಾನಗಳನ್ನು ಹೇಳುತ್ತಾರೆ. ಇಂಥ ಅದಮ್ಯ ಚೇತನದ ಜೊತೆ ಕೆಲಸ ಮಾಡುತ್ತಿರುವ ನನಗೆ ಹೆಮ್ಮೆಯ ಭಾವವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ..

 

 

About the Author

ಸಿ.ಆರ್‌. ಕೃಷ್ಣರಾವ್

ವಿದ್ವಾಂಸ,  ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಸಿ.ಆರ್‌. ಕೃಷ್ಣರಾವ್‌ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 2023 ಸೆಪ್ಟೆಂಬರ್ 10 ನಿಧನ.  ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ.  'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.    ...

READ MORE

Related Books