‘ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಡಾ.ಎಸ್.ಪಿ. ಪದ್ಮಪ್ರಸಾದ್ ಅವರ ನಾಲ್ಕನೇ ಪ್ರವಾಸ ಕಥನ. ಕನ್ನಡದ ಹಿರಿಯ ವಿದ್ವಾಂಸರೂ, ಸೃಜನಶೀಲ ಲೇಖಕರೂ ಆದ ಇವರು ತಮ್ಮ ಅರವತ್ತೇಳನೇ ವಯಸ್ಸಿನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್ ಗಳನ್ನುಮೊದಲಬಾರಿಗೆ ಏಕಾಂಗಿಯಾಗಿ ತಿರುಗಾಡಿ ಕಂಡ ನೋಟಗಳ, ಪಡೆದ ಅನುಭವಗಳ ವಿಶಿಷ್ಟ ನಿರೂಪಣೆ ಇಲ್ಲಿದೆ. ಬ್ರಿಟಿಷ್ ನಾಡನ್ನು ಕುರಿತ ಹಲವು ಪ್ರವಾಸ ಕಥನಗಳಿಗಿಂತಲೂ ಇದು ಭಿನ್ನವಾದುದು. ಪ್ರವಾಸಿ ಹಾಸ್ಟೆಲ್ ಗಳಲ್ಲಿ ವಾಸಿಸಿ, ತಾವೇ ಹಾದಿ ಹುಡುಕಿಕೊಂಡು ತಿರುಗಿ, ಆ ನಾಡಿನ ಹಲವಾರು ಸುಪ್ರಸಿದ್ಧ ಮ್ಯೂಸಿಯಂಗಳನ್ನು, ಚರ್ಚ್, ಅರಮನೆಗಳನ್ನು, ಮತ್ತಿತರ ಆಸಕ್ತಿಕರ ತಾಣಗಳನ್ನು ಕಂಡ ವಿವರಗಳು ಇಲ್ಲಿ ಸ್ವಾರಸ್ಯಕರವಾಗಿ ಕಥಿಸಲ್ಪಟ್ಟಿವೆ. ಪಿಕ್ ಪಾಕೆಟ್ ಪ್ರಕರಣ, ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್ ವಿವರಗಳು, ಕವಿ ಕೀಟ್ಸ್ ನ ಮನೆಯನ್ನು ಕಂಡದ್ದು, ಷೇಕ್ಸ್ ಪಿಯರ್ ನ ಗ್ಲೋಬ್ ಥಿಯೇಟರ್ ನಲ್ಲಿ ನಾಟಕ ನೋಡಿದ್ದು, ಎಲ್ಲ ಓದುಗರ ಅನುಭವವನ್ನು ವಿಸ್ತರಿಸುವಂಥವು. ಈ ಕೃತಿಯ ಓದು ಮನರಂಜನೆಯೂ ಹೌದು. ಶಿಕ್ಷಣವು ಹೌದು.
©2024 Book Brahma Private Limited.