About the Author

ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರು. ಇವರು ಚೂಂತಾರು ಹಾಗೂ ಮುಕ್ರುಂಪಾಡಿಯ 'ದ್ವಾರಕಾ'ದಲ್ಲಿ ನಡೆಯುವ ವಸಂತ ವೇದಪಾಠ ಶಿಬಿರದಲ್ಲಿ ಕಳೆದ 8 ವರ್ಷಗಳಿಂದ ವೇದ ಅಧ್ಯಾಪಕರಾಗಿ ತೊಡಗಿಸಿಕೊಂಡಿದ್ದಾರೆ. ಪ್ರಕೃತಿ-ಪ್ರಾಣಿ-ಪಕ್ಷಿಗಳ ಕುರಿತಾದ, ಸಾಹಿತ್ಯ ಕೃತಿಗಳ ಬಗೆಗಿನ ಇವರ ಅನೇಕ ಲೇಖನಗಳು ವಿಶ್ವವಾಣಿ, ವಿಜಯಕರ್ನಾಟಕ, ಭಾರತವಾಣಿ, ಜ್ಞಾನತಾಣ, ಉದಯವಾಣಿ ಮುಂತಾದ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವನ್ಯಜೀವಿ ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಪ್ರವಾಸ, ಓದು-ಬರೆಹ ಇವರ ಹವ್ಯಾಸಗಳು.  

ಕೃತಿಗಳು: ಹೆಜ್ಜೆ ಊರುವ ತವಕ 

ನವೀನಕೃಷ್ಣ ಎಸ್. ಉಪ್ಪಿನಂಗಡಿ

(18 Jul 2003)