‘ಸ್ವರ್ಗದೊಂದಿಗೆ ಅನುಸಂಧಾನ’ ಚಾರ್ ಧಾಮ್ ಪ್ರವಾಸ ಕಥನ ಕೃತಿಯು ನೂತನ ದೋಶೆಟ್ಟಿ ಅವರ ಪ್ರವಾಸ ಕಥನವಾಗಿದೆ. ಪ್ರವಾಸ ನನ್ನೊಳಗೆ ಸೃಷ್ಟಿಸುವ ಒಂದು ಅಗಾಧತೆಯ, ವೈಶಾಲ್ಯತೆಯ ದೃಷ್ಟಿಕೋನದಿಂದ ಅದೊಂದು ಚೈತನ್ಯದಾಯಕ ಜೌಷಧವಿದ್ದಂತೆ ಎನ್ನುತ್ತಾರೆ ಇಲ್ಲಿ ಲೇಖಕಿ. ಚಾರ್ ಧಾಮಕ್ಕೆ ಹೋಗುವ ನಿರ್ಧಾರದಿಂದಲೇ ಪುಳಕಗೊಂಡಿದ್ದೆ. 11.755 ಅಡಿ ಎತ್ತರದಲ್ಲಿ ನಾವು ಪ್ರವಾಸ ನಿಗದಿ ಪಡಿಸಿದ್ದ ದಿನಗಳಲ್ಲಿ ಬೆಳಿಗ್ಗೆ 12 ಡಿಗ್ರಿ ಹಾಗೂ ಸಂಜೆ 6 ಡಿಗ್ರಿ ಉಷ್ಣಾಂಶವಿದ್ದು ರಾತ್ರಿಯಲ್ಲಿ ಉಷ್ಣಾಂಶ ಕಡಿಮೆಯಾಗಿದ್ದು ಮಾತ್ರವಲ್ಲದೇ ಇಡಿಯ ಉತ್ತರಾಖಂಡದಲ್ಲಿ ಆಗ ಜಲಪ್ರಳಯ ಹಾಗೂ ಭೂಕುಸಿತ ಸಾಮಾನ್ಯವಾಗಿತ್ತು. ಚಾರ್ ಧಾಮ ಪ್ರವಾಸ ಉಳಿದ ಪ್ರವಾಸದಂತೆ ಸರಳವಾಗಿರದೆ ಅದಕ್ಕೆ ವಿಶೇಷ ತಯಾರಿ ಬೇಕಾಗುತ್ತದೆ. ಏಪ್ರಿಲ್ ಮೇ ತಿಂಗಳಲ್ಲಿ ಜನದಟ್ಟಣೆ ಅತ್ಯಧಿಕವಾಗಿದ್ದು, ಜೂನ್-ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತದೆ. ಅಕ್ಟೋಬರಿನಲ್ಲಿ ಹಿಮಪಾತವಿರುತ್ತದೆ. ಆದ್ದರಿಂದ ನಾನು ಆರಿಸಿಕೊಂಡಿದ್ದು ಮಳೆ ಮುಗಿದು ಬಿಸಿಲು ಕಾಣುವ ಸಪ್ಟೆಂಬರ್ ತಿಂಗಳ ಮೂರನೇ ವಾರವನ್ನು ಎನ್ನುತ್ತಾರೆ ಲೇಖಕಿ ನೂತನ ದೋಶೆಟ್ಟಿ.
©2024 Book Brahma Private Limited.