ಕನ್ನಡದ ಪ್ರಮುಖ ಲೇಖಕಿಯಲ್ಲಿ ನೂತನ ಎಮ್. ದೋಶೆಟ್ಟಿ ಅವರು ಒಬ್ಬರು. ನೂತನ ಅವರು 1968 ಸೆಪ್ಟಂಬರ್ 6 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ’ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳ” ಅವರ ಪ್ರಮುಖ ಸಂಕಲನಗಳು. ’ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ’ ಅವರ ಮೊದಲ ಕಥಾ ಸಂಕಲನಗಳು. ಅವರ ಬರಹಗಳು ’ಕರ್ಮವೀರ, ಸುಧಾ, ತುಷಾರ, ಕಸ್ತೂರಿ, ದ ವೀಕ್, ಇಂಡಿಯಾ ಟುಡೆ, ಪ್ರಜಾವಾಣಿ, ಕನ್ನಡ ಪ್ರಭ, ಸುಮುಖ’ ಮತ್ತಿತರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್’, ಅವರ ಕತೆ ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು.
ಕೃತಿಗಳು: ಮಾತೆಂದರೆ ಏನು ಗೂಗಲ್?(ಕವನ ಸಂಕಲನ), ಸ್ವರ್ಗದೊಂದಿಗೆ ಅನುಸಂಧಾನ(ಪ್ರವಾಸ ಕಥನ)