'ದೇಶ ನೋಡೋಕಿಂತ ಕೋಶ ಓದು' ಎಂಬ ಲೋಕೋಕ್ತಿಯಂತೆ ಇಂದು ಓದುವುದರ ಮೂಲಕವೇ ಪ್ರಪಂಚ ದರ್ಶನ ಮಾಡಿಬಿಡಬಹುದು. ಅಂಥ ದರ್ಶನ ಮಾಡಿಸುವ ಶಕ್ತಿ ಇಂಥ ಮಾರ್ಗದರ್ಶಕ ಮಾಹಿತಿಗಳ ಕೈಪಿಡಿಯನ್ನು ರೂಪಿಸುವ ಕಲೆ ಡಿ.ಎಸ್. ಲಿಂಗರಾಜು ಅವರಿಗಿದೆ ಎಂಬುದನ್ನು ಈ ಕೃತಿ ಪ್ರತಿ ವಾಕ್ಯದಲ್ಲಿ ಸಾಬೀತುಪಡಿಸುತ್ತದೆ. ಹಾಗೂ ಆ ದೇಶವನ್ನು ಕಣ್ಣಾರೆ ಕಂಡ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತದೆ. ಪ್ರಸ್ತುತ ಪುಸ್ತಕ ಸರಿಯಾಗಿ ನಮ್ಮ ಭಾರತದ ನೆತ್ತಿಯ ಮೇಲಿರುವ 'ಚಳಿ ದೇಶಗಳಾದ ರಷ್ಯಾ, ಉಜ್ಜಿಕಿಸ್ತಾನ ಮತ್ತು ತಾಜಕಿಸ್ತಾನಗಳನ್ನು ಹೃದಯಂಗಮವಾಗಿ ಪರಿಚಯಿಸುತ್ತದೆ. ಆ ದೇಶಗಳ ಒಂದು ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟಿದಂತೆ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಆಯಾ ದೇಶಗಳ ಇತಿಹಾಸ, ಸಂಸ್ಕೃತಿ, ಸಮಾಜ ಜೀವನ, ಕಲೆಸಾಹಿತ್ಯ-ಸಂಗೀತ-ನೃತ್ಯ, ನಂಬಿಕೆ-ಸಂಪ್ರದಾಯಗಳನ್ನು ಕುರಿತ ವಿವರಗಳಿಂದ ಮಾಹಿತಿಗಳ ಗಣಿಯಾಗಿದೆ.
©2024 Book Brahma Private Limited.