ಲೇಖಕಿ ಭಾರತಿ ಬಿ.ವಿ. ಅವರ ಪ್ರವಾಸ ಕಥನ ʻನಕ್ಕತ್ರಗಳ ಸುಟ್ಟ ನಾಡಿನಲ್ಲಿ- ಇದು ಪೋಲೆಂಡ್ ಪ್ರವಾಸ ಕಥನʼ..ಇತಿಹಾಸ ಪ್ರಧಾನವಾಗಿರುವ ಸ್ಥಳಗಳು, ಅಲ್ಲಿನ ಪ್ರಸಿದ್ದ ನಾಯಕರು, ಜನರ ಸಂಸ್ಕೃತಿ ಹೀಗೆ ಹಲವಾರು ವಿಷಯಗಳನ್ನು ಕಂಡು ಅನುಭವಿಸಿದ ನೆನಪಿನ ಕತೆಗಳನ್ನು ಲೇಖಕಿ ಇಲ್ಲಿ ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಹಾಗೆಯೇ, ಓದುತ್ತಾ ಅಡೋಲ್ಫ್ ಹಿಟ್ಲರ್‌ನ ಆಡಳಿತ, ಜನರ ಮೇಲೆ ತೋರುತ್ತಿದ್ದ ಕ್ರೌರ್ಯ, ಗ್ಯಾಸ್ ತುಂಬಿದ ಕಾನ್ಸಂಟ್ರೇಶನ್ ಕ್ಯಾಂಪ್‌ನಿಂದ ಯಹೂದಿಗಳನ್ನು ಆಸ್ಕರ್ ಶಿಡ್ಲಂರ್ಸ್ ಎಂಬ ಉದ್ಯಮಿ ಶಿಡ್ಲಂರ್ಸ್ ರಕ್ಷಿಸಿದ ಕತೆಗಳು ಬೆಚ್ಚಿಬೀಳಿಸುವಂತಹವು. ಶಿಡ್ಲಂರ್ಸ ಎಂಬ ಅಜ್ಞಾತ ಸಾಹಸಿಗನ ಸಾಹಸ ದೃಶ್ಯಗಳಂತೂ ಓದುಗನನ್ನು ಕಾಡುವಂತಿದೆ.
©2024 Book Brahma Private Limited.