ನಡೆದಷ್ಟೂ ನಾಡು

Author : ರಹಮತ್ ತರೀಕೆರೆ

Pages 176

₹ 110.00




Published by: ನವಕರ್ನಾಟಕ ಪ್ರಕಾಶನ
Address: 5, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಅಂ.ಪೆ. 5159, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001 

Synopsys

ನಡೆದಷ್ಟೂ ನಾಡು ಕೃತಿಯು ಕರ್ನಾಟಕದ ವಿವಿಧ ಪ್ರದೇಶಗಳಿಗೆ ನೀಡಿದ ಭೇಟಿ ಮತ್ತು ಮಾಡಿದ ಪ್ರವಾಸದ ಅನುಭವಗಳಿರುವ ಲೇಖನಗಳಿವೆ. ಒಟ್ಟು 23 ಬರಹಗಳು ಈ ಗ್ರಂಥದಲ್ಲಿವೆ. ಕೆಲವು ಬರಹಗಳು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದವುಗಳು. ಬಿಜಾಪುರದ ತ್ರಿಪುರ ಸುಂದರಿ ಟಾಕೀಸು, ಒಂದು ಜೆಸಿಇ ಮನೆ ಕೆಡವಿದ ಕತೆ, ಬನಶಂಕರಿ ಜಾತ್ರಿ, ಹಂಪಿ ಟು ಬಸ್ರೂರು, ದೊಡ್ಡನಗೌಡರ ಜೋಳದರಾಶಿ, ಪೋಸ್ಕೊ ಕದನ, ಧರ್ಮಶಾಲೆಯಲ್ಲಿ ಧ್ಯಾನ ಮತ್ತು ಸಂಘರ್ಷ, ಜೊರಶಂಕೊ ಹಾಗೂ ಕುಪ್ಪಳಿ, ಗೇರುಸೊಪ್ಪೆಯ ಜಟ್ಟಿಗನ ಕಲ್ಲುಗಳು, ರಂಗನಟಿ ಫ್ಲೋರಿನಾ, ಶಿಯಾಗಳು: ರಕ್ತಪಾತ ಮತ್ತು ಕಾವ್ಯ, ಕನ್ನಡ ಶಿವನಿಗೆ ತೆಲುಗು ಪಾರ್ವತಿ, ಶೋಲಾ ಕಾಡುಗಳಿಂದ ಮರಳಿದ ಮೇಲೆ, ಮಾತೇ ಮಾಧ್ಯಮವಾಗಿದ್ದ ಕಿರಂ. ಕಲ್ಯ ಎಂಬ ಪಟ್ಟಣದ ಕತೆ, ಕಾಮರೂಪದ ಪ್ರಭಾಕರ, ಕರ್ನಾಟಕದಲ್ಲೊಂದು ಆಫ್ರಿಕನ್ ಸೋಗು, ನೆರೆಕುಸಿದ ಮನೆಗಳ ನಡುವೆ, ಕಲಾದಗಿಯ ಬ್ರಿಟಿಷ್ ಗೋರಿಗಳು, ಹಡಗಲಿಯಲ್ಲಿ ಸವಾಲ್ ಜವಾಬ್. ಹಂಪಿಯ ಸದಾಶಿವಯೋಗಿ, ರಾಮದುರ್ಗದ ದಂತೆ, ಹಿಮನದಿಯ ದಡಗಳಿಂದ ಬರಹಗಳಿವೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Reviews

(ಹೊಸತು, ಅಕ್ಟೋಬರ್ 2012, ಪುಸ್ತಕದ ಪರಿಚಯ)

ಸಮಾಜದ ಕುರಿತಾದ ತೀವ್ರ ಚಿಂತನೆಗೆ ನಮ್ಮನ್ನು ಕೊಂಡೊಯ್ಯುವ ರಹಮತ್‌ ರವರ ''ನಡೆದಷ್ಟೂ ನಾಡು' ಕೃತಿ ಅವರ ಸಾಮಾಜಿಕ ಕಾಳಜಿಗೆ ಸಂಕೇತವಾಗಿದೆ. ಸಮಕಾಲೀನ ಸಂಗತಿಗಳಿಗೆ ಸಾಂಸ್ಕೃತಿಕ ಆಯಾಮ ನೀಡಿ ಅದನ್ನು ಸಾಮಾನ್ಯರಿಗೂ ತಲುಪಿಸುವ ಶಕ್ತಿ ಈ ಕೃತಿಯ ಲೇಖನಗಳಿಗಿದೆ. ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವ ನಮ್ಮ ವಿಶಿಷ್ಟ ಪರಂಪರೆ, ಮೌಲ್ಯ, ಸಾಧುಸಂತರ ಸತ್ವವನ್ನು ಪರಿಚಯಿಸುತ್ತಾ, ಆಧುನಿಕತೆ ಮತ್ತು ಅದರೊಳಗಿನ ಪಲ್ಲಟಗಳನ್ನು ಕಾಣಿಸುವಲ್ಲಿ ಕೃತಿ ಯಶ ಕಂಡಿದೆ. ನೆಲಸಂಸ್ಕೃತಿಯ ದಾರ್ಶನಿಕರ ಜಾಡನ್ನು ಸ್ಥಳೀಯ ಹಿರಿಯರಿಂದ ಕಲೆಹಾಕುತ್ತಾ, ಅದನ್ನು ಕುರುಡಾಗಿ ನಂಬದೆ ಅದರ ವಾಸ್ತವ ಅವಾಸ್ತವದ ಚಿಂತನೆಯನ್ನೂ ಸಹ ಈ ಕೃತಿಯ ಲೇಖಕರು ಮಾಡುತ್ತಾರೆ. ಇದು ದೇಸಿ ಸಂಸ್ಕೃತಿಯ, ವಿವಿಧ ವಿಶಿಷ್ಟ ಪರಂಪರೆಗಳನ್ನು ಕಟ್ಟಿಕೊಡುವ ಕೃತಿ. ಅಷ್ಟೇ ಅಲ್ಲದೆ ಇಂದಿನ ಪ್ರಭುತ್ವಗಳು ಅಭಿವೃದ್ಧಿಯ ನೆಪದಲ್ಲಿ ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಅತಿರೇಕಗಳನ್ನೂ ದಾಳಿತನಗಳನ್ನೂ ಕಟ್ಟಿಕೊಡುವ ಕೃಷಿ ರೈತರ ಆತ್ಮಹತ್ಯೆಗಳು, ನಿರ್ಗತಿಕರಾಗುತ್ತಿರುವ ಭೂ ಒಡೆಯರು, ಲಾಭ ಗಳಿಸುತ್ತಿರುವ ಉದ್ದಿಮೆದಾರರು, ಇದರಿಂದ ಸಮಾಜದಲ್ಲಾಗುತ್ತಿರುವ ಅಸಮತೋಲನ, ಇದರ ಮುಂದಿನ ಅಪಾಯಗಳನ್ನು ಕೃತಿ ಮನಗಾಣಿಸುತ್ತಲೇ ಪ್ರಜಾಪ್ರಭುತ್ವದ ಹೆಸರಲ್ಲಿ ನಮ್ಮ ರಾಜಕಾರಣಿಗಳು ಸ್ವಾರ್ಥ ಪರವಾದ ಕಾನೂನುಗಳನ್ನು ರೂಪಿಸಿ ನೈಸರ್ಗಿಕ ಪರಿಸರವನ್ನು ಲೂಟಿ ಮಾಡುತ್ತಿರುವ ಪರಿಯನ್ನು ತುಂಬ ಕಾಳಜಿಯಿಂದ ಹಾಗೂ ವಿಷಾದದಿಂದ ಚಿತ್ರಿಸುತ್ತದೆ.

Related Books