ಮೆಲ್ಬೋರ್ನ್, ಗೋಲ್ಡ್ ಕೋಸ್ಟ್ ಮತ್ತು ಸಿಡ್ನಿ

Author : ಸೂರಿ ಹಾರ್ದಳ್ಳಿ

Pages 118

₹ 70.00




Year of Publication: 2016
Published by: ಮಂಗಳಾ ಪ್ರಕಾಶನ
Address:  # 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿ ನಗರ, ಬೆಂಗಳೂರು

Synopsys

ಲೇಖಕ ಸೂರಿ ಹಾರ್ದಳ್ಳಿ ಅವರ ಪ್ರವಾಸ ಕಥನ-ಮೆಲ್ಬೋನ್, ಗೋಲ್ಡ್ ಕೋಸ್ಟ್ ಮತ್ತು ಸಿಡ್ನಿ. ಲೇಖಕರು ಹಾಸ್ಯ ಬರಹಗಾರರು  ಪ್ರವಾಸ ಕಥನದಲ್ಲಿಯೂ ಹಾಸ್ಯವನ್ನು ತೂರಿಸುವುದು ನಾನಿಲ್ಲಿ ಪ್ರಥಮವಾಗಿ ಕಂಡೆ ಎನ್ನುತ್ತಾರೆ ಓದುಗರೊಬ್ಬರು. ಈ ಪ್ರವಾಸ ಕಥನವು ವಿದೇಶ ಪ್ರಯಾಣಕ್ಕೆ ಹೊರಡುವ ತಯಾರಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡುತ್ತದೆ. ಸಾಂದರ್ಭಿಕವಾಗಿ ಇಲ್ಲಿ ಲೇಖಕರು ಒಂದಷ್ಟು ಘಟನೆಗಳನ್ನು ಹೇಳುತ್ತಾ ನಗಿಸುತ್ತಾರೆ. ಆಸ್ಟ್ರೇಲಿಯಾ ಸಿಡ್ನಿ, ಗೋಲ್ಡ್ ಕೋಸ್ಟ್ ಮತ್ತು ಮೆಲ್ಬೋರ್ನ್‌ಗಳಲ್ಲಿ ಸುತ್ತಾಡುತ್ತಾ ಅಲ್ಲಿಯ ಅನೇಕ ಪ್ರವಾಸಿ ಸಂಗತಿಗಳು, ವೈಶಿಷ್ಟ್ಯಗಳನ್ನು ಹಗುರ ದಾಟಿಯಲ್ಲಿ ಪರಿಚಯಿಸುತ್ತಾ ನಮ್ಮನ್ನು ಮಾನಸಿಕವಾಗಿ ಅಲ್ಲೆಲ್ಲಾ ಅಲೆಯುವಂತೆ ಮಾಡುತ್ತಾರೆ. ಅಲ್ಲಿನ ಬ್ಯಾಂಕ್, ಹಣ. ವಿನಿಮಯದ ಸಂಗತಿಗಳು, ಆಹಾರ ಎಲ್ಲವನ್ನೂ ಈ ಕೃತಿಯಲ್ಲಿ ಚೊಕ್ಕವಾಗಿ ಬಣ್ಣಿಸಿದ್ದಾರೆ. ವಿನೋದವಾಗಿ ಮೂಡಿಬಂದಿರುವ ಪ್ರವಾಸ ಕಥನ ಒಂದಷ್ಟು ಬೇರೆಯದೇ ಅನುಭವ ಕೊಡುತ್ತ, ಅಲ್ಲಲ್ಲಿ ಓದುಗರನ್ನು ನಗಿಸುತ್ತಾ, ಒಂದು ಹದವಾದ ಮನೋರಂಜನೆಯನ್ನೂ ನೀಡುತ್ತದೆ.

 

About the Author

ಸೂರಿ ಹಾರ್ದಳ್ಳಿ
(30 January 1955)

ಲೇಖಕ ಸೂರಿ ಹಾರ್ದಳ್ಳಿ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿಯವರು. ತಂದೆ- ಕೃಷ್ಣದೇವ ಕೆದಿಲಾಯ, ತಾಯಿ- ಶಾರದಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾರ್ದಳ್ಳಿಯಲ್ಲಿ, ಹೈಸ್ಕೂಲನ್ನು ಬಿದಕಲ್ ಕಟ್ಟೆ ಮತ್ತು ಪಿ.ಯು.ಸಿ ಯನ್ನು ಶಂಕರ ನಾರಾಯಣ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿಗೆ ಬಂದ ಸೂರಿ ಅವರು ವಸತಿಗೃಹವೊಂದರಲ್ಲಿ ಮಾಣಿಯಾಗಿ ಸೇರಿ, ಅಲ್ಲಿಯ ಮಾಲೀಕರ ಪ್ರೋತ್ಸಾಹದೊಂದಿಗೆ  ಕಲಿಕೆ ಮುಂದುವರಿಸಿದರು. ಬಿ.ಎ. ಪದವೀಧರರಾದರು-ಬಾಹ್ಯ ವಿದ್ಯಾರ್ಥಿಯಾಗಿ.   ಬಿಸ್ಕತ್ ಕಾರ್ಖಾನೆ ಸೇರಿದಂತೆ ರಾಯಚೂರಿನ ರಾಯಚೂರು ವಾಣಿಯಲ್ಲಿ ಕೆಲಸಕ್ಕೆ ಸೇರಿದರು ಕೊನೆಗೆ ಮೈಕೋ ಉಪಕಾರಗೃಹದಲ್ಲಿ ಕೆಲಸ ಸಿಕ್ಕಿತು. ಪರೀಕ್ಷೆ, ಸ್ಪರ್ಧೆ ಪ್ರತಿನಿತ್ಯದ ಕ್ರಮವಾಗಿದ್ದು, ಎಲ್ಲರನ್ನೂ ಹಿಂದಿಕ್ಕಿ ಬಡ್ತಿ ಪಡೆದು, ...

READ MORE

Related Books