ಲೇಖಕಿ ಮಂಜುಳಾದೇವಿ ಅವರ ಕೃತಿ ಅವರ ಆಸ್ಟ್ರೇಲಿಯಾ ಪ್ರವಾಸ ಬರಹವಾಗಿದೆ. ಅವರು ಕಂಡ ಚೆಲುವು-ಚಹರೆಗಳನ್ನು, ಚಲನಶೀಲ ಗುಣಗಳನ್ನು ಬಿಡಿಬಿಡಿಯಾಗಿ ಸೆರೆಹಿಡಿದು ಒಂದೆಡೆ ಸಂಕಲಿಸಿದ್ದಾರೆ.
ವಿದೇಶಿ ನೆಲದಲ್ಲಿ ಭಾರತೀಯ ಮನಸ್ಸೊಂದು ಅನುಭವಿಸುವ ಎಲ್ಲ ಬಗೆಯ ಆತಂಕ, ಅಚ್ಚರಿ, ಆನಂದದ ಕ್ಷಣಗಳನ್ನು ಒಳಗೊಂಡಿದೆ. ಆಸ್ಟ್ರೇಲಿಯಾದ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಸಾಂದರ್ಭಿಕ ವಿವರಗಳೊಂದಿಗೆ ಕಟ್ಟಿಕೊಡುವಲ್ಲಿ ಇಲ್ಲಿಯ ಬರಹಗಳು ವಿಶೇಷವಾಗಿದೆ.
©2024 Book Brahma Private Limited.