ಲಂಡನ್ ನಗರದ ಪ್ರವಾಸ ಕೈಗೊಂಡಿದ್ದ ಲೇಖಕರು ಪ್ರಸಿದ್ಧ ಬಕಿಂಗ್ ಹ್ಯಾಮ್ ಅರಮನೆಯ ವಿಶೇಷತೆ, ಇತಿಹಾಸವನ್ನು ತಿಳಿದು, ಬ್ರಿಟಿಷ್ ಚಕ್ರಾಧಿಪತ್ಯವನ್ನು ಆಳಿ, ಮೆರೆದ ಬ್ರಿಟಿಷ್ ರಾಜ ರಾಣಿಯರ ಜೀವನಚರಿತ್ರೆಯನ್ನು ಇಲ್ಲಿ ದಾಖಲಿಸಿದ್ದಾರೆ.
ಇಂಗ್ಲೆಂಡಿನ ವೈಶಿಷ್ಟ್ಯವೆಂದರೆ, ಅಲ್ಲಿ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಹಾಸು ಹೊಕ್ಕಾಗಿವೆ. Monarchy ಮತ್ತು Democracy ಒಟ್ಟೊಟ್ಟಿಗೆ ಸಹವರ್ತಿಗಳಾಗಿ ದೇಶವನ್ನು ಆಳುತ್ತಿವೆ. ಇಂಗ್ಲೆಂಡನ್ನು ಆಕ್ರಮಿಸಿ ಆಳಿದ ಫ್ರೆಂಚ್ ರಾಜ ವಿಲಿಯಮ್ ದಿ ಕಾನ್ ಖ್ವರರ್ ನಿಂದ ಹಿಡಿದು ಎರಡನೆಯ ಎಲಿಝಬೆತ್ ರಾಣಿಯವರೆಗಿನ ಕಥಾಪುಂಜವನ್ನು ಈ ಪುಸ್ತಕದಲ್ಲಿ ಸವಿಸ್ತಾರವಾದ ವಿವರಗಳಿವೆ. ಇಂಗ್ಲೆಂಡ್ ನ ರಾಜ ರಾಣಿಯರು ಆಡಳಿತ, ತಮ್ಮ ಶೌರ್ಯ, ಪ್ರತಾಪ, ಕುಟಿಲತೆ, ಕ್ರೂರತೆ, ರಾಜಕೀಯ ಕುಶಲತೆ, ಪರರಾಷ್ಟ್ರಗಳ ವಿರುದ್ಧ ಜರುಗಿಸಿದ ಆಕ್ರಮಣಕಾರಿ ಯುದ್ಧಗಳು, ದುರಾಕ್ರಮಣಗಳು, ಹತ್ಯೆಗಳು, ಪಿತೂರಿಗಳು ಮುಂತಾದ ಐತಿಹಾಸಿಕ ಸಂಗತಿಗಳು ರೋಚಕ ಹಾಗೂ ಮನರಂಜನೆಯಿಂದ ಕೂಡಿದೆ.
©2024 Book Brahma Private Limited.