‘ಬುದ್ಧಭಕ್ತರ ನಾಡಿನಲ್ಲಿ’ ಕೃತಿಯು ಎಸ್. ಪಿ ಪದ್ಮಪ್ರಸಾದ್ ಅವರ ಪ್ರವಾಸ ಕಥನವಾಗಿದೆ. ಮ್ಯಾನ್ಮಾರ್ ದೇಶವನ್ನು ಕುರಿತಂತೆ ಕನ್ನಡದಲ್ಲಿ ಬಂದಿರುವ ಅಪರೂಪದ ಕೃತಿ ಇದು. ಇಲ್ಲಿ ಲೇಖಕ 15 ದಿನಗಳ ಕಾಲ ಆ ದೇಶದ ಉದ್ದಗಲಕ್ಕೂ ತಿರುಗಾಡಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಬೌದ್ಧ ಸಂಪ್ರದಾಯಗಳು, ಜನಜೀವನ ಇತ್ಯಾದಿ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು ರಂಜನೀಯ ಶೈಲಿಯಲ್ಲಿ ನಿರೂಪಿಸಿದ್ದಾರೆ. ಸುಮಾರು ಅರವತ್ತು ಛಾಯಾಚಿತ್ರಗಳನ್ನೂ ಹೊಂದಿರುವ ಈ ಕೃತಿ ಕನ್ನಡ ಸಾಹಿತ್ಯಕ್ಕೆ ಒಂದು ಉಪಯುಕ್ತವಾದ ಕೃತಿಯಾಗಿದೆ.
©2024 Book Brahma Private Limited.