ಅಥೆನ್ಸ್ ನಿಂದ ಇಸ್ತಾನ್ ಬುಲ್ ಗೆ

Author : ಆಗುಂಬೆ ಎಸ್. ನಟರಾಜ್‌

Pages 132

₹ 100.00




Year of Publication: 2014
Published by: ಹಂಸ ಪ್ರಕಾಶನ
Address: 947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 08023383004

Synopsys

‘ಅಥೆನ್ಸ್ ನಿಂದ ಇಸ್ತಾನ್ ಬುಲ್ ಗೆ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಕಥನ. ಪ್ರಾಚೀನ ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರ, ಅದರ ಗುಡಿ ಗೋಪುರ ಅವಶೇಷಗಳು, ಅವುಗಳ ಚರಿತ್ರೆ, ಅದೇ ದೇಶದ ಇತರೆ ನಗರಗಳಾದ ಡೆಲ್ಫೀ, ಮೀಟೀಯೋರಾ, ಫಿಲಿಪ್ಪೀ, ಅಲೆಕ್ಸಾಂಡರ್ ಪೌಲಿಗಳ ಚರಿತ್ರೆ ಮತ್ತು ತುರ್ಕೀ ದೇಶದ ಪ್ರಖ್ಯಾತ ನಗರ ಇಸ್ತಾನ್ ಬುಲ್ ನ ಚರಿತ್ರೆಯನ್ನೊಳಗೊಂಡ ಈ ಪ್ರವಾಸ ಕಥನವನ್ನು ಲೇಖಕರು ಅತ್ಯಂತ ಪರಿಣಾಮಕಾರಿಯಾಗಿ ಅಕ್ಷರರೂಪಕ್ಕಿಳಿಸಿದ್ದಾರೆ. 

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books