ಲೇಖಕಿ, ಅನುವಾದಕಿ ಸುಮಂಗಲಾ ಮುಮ್ಮಿಗಟ್ಟಿಯವರು ಅಂಡಮಾನ್ ಪ್ರವಾಸದ ಅನುಭವಗಳನ್ನು ’ಅದ್ಭುತ ಜೀವಾವಾಸ ಅಂಡಮಾನ್’ ಎಂಬ ಪ್ರವಾಸ ಕಥನದ ಮೂಲಕ ಹೊರತಂದಿದ್ದಾರೆ.
ಈ ಪ್ರವಾಸ ಕಥನವು ಕೇವಲ ಪ್ರವಾಸಿಗರ ತಾಣವಾಗಿರದೆ, ಇತಿಹಾಸದ ಪರಿಚಯಕ್ಕೂ, ಜೀವ ವೈವಿಧ್ಯಗಳ ಪ್ರಾಚೀನತೆಗಳ ಸಂಗತಿಯ ಆಗರವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತದೆ. ಸುಮಂಗಲಾ ಅವರ ಪ್ರವಾಸದ ಅನುಭವ ಅಂಡಮಾನ್ ದ್ವೀಪದ ಬಗ್ಗೆ, ಶಾಂತ ಉಷ್ಣವಲಯದ ವಾತಾವರಣದ ಬಗ್ಗೆ , ಹವಳದ ದಿಬ್ಬಗಳ ಬಗ್ಗೆ, ವೈವಿಧ್ಯಮಯ ಸಮುದ್ರ ಜೀವಿಗಳ ಬಗ್ಗೆಯೂ ತಿಳಿಸುವ ವಿಶೇಷ ಕಥನವಾಗಿದೆ.
ಮುಖ್ಯವಾಗಿ ಸುಮಂಗಲಾ ಅವರು ಪ್ರಕೃತಿ ಪ್ರೇಮಿಯ ಪ್ರವಾಸ ಕಥನ ಎನ್ನುವುದರ ಹಿನ್ನಲೆಯಾಗಿ ಪ್ರಕೃತಿಯ ಸೌಂದರ್ಯವನ್ನು, ಸಾಮಾನ್ಯ ಜೀವಿಗೂ ಸಹ ಪ್ರಕೃತಿ ನೀಡುವ ಚೈತನ್ಯಪೂರ್ಣ ಅನುಭವವನ್ನು ವಿವರಣಾತ್ಮಕವಾಗಿಯೂ, ಕಲಾತ್ಮಕ ವರ್ಣನೆಗಳಿಂದಲೂ ’ಅದ್ಭುತ ಜೀವಾವಾಸ ಅಂಡಮಾನ್’ ಕೃತಿಯಲ್ಲಿ ವಿವರಿಸಿದ್ಧಾರೆ.
©2024 Book Brahma Private Limited.