'ಯೋಗರತ್ನ' ಇದುವರೆಗೆ ಪ್ರಕಟಗೊಂಡ ಯೋಗಾಸನಗಳ ಕೃತಿಗಳಲ್ಲಿ ಸರ್ವಶ್ರೇಷ್ಠವಾದ ಮತ್ತು ಹೆಚ್ಚು ವೈಚಾರಿಕವಾಗಿ, ವೈಜ್ಞಾನಿಕವಾಗಿ ರಚಿಸಲ್ಪಟ್ಟ ಮಹತ್ವದ ಕೃತಿಯಾಗಿದೆ. 'ಯೋಗವೆಂದರೆ ಚಿತ್ತ ವೃತ್ತಿಗಳ ನಿರೋಧ ವಾಗಿದೆಯೆಂಬ ಮಾತು ಈ ಕೃತಿಗೆ ಹೆಚ್ಚು ಅನ್ವಯಿಸುತ್ತದೆ. ಯೋಗ ಮತ್ತು ಯೋಗಾಸನಗಳಿಂದ ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿ ಇಡುವುದೆಂದೂ, ಚಿತ್ರದ ಅಥವಾ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸುವುದೆಂದು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಸಾಧನೆಗೆ ಅಷ್ಟಾಂಗ ಯೋಗ ಮುಖ್ಯವಾಗಿದೆಯೆಂಬ ತಿಳುವಳಿಕೆ ಕೊಡಲಾಗಿದೆ. ಪತಂಜಲಿ ಯೋಗ-ಯೋಗಾಸನಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಬರೆದಿದ್ದಾರೆ. ಸಮಗ್ರ ಯೋಗದರ್ಶನವನ್ನು ಮಾಡಿಸಿದ್ದಾರೆ. ಯೋಗದ ಪರಿಚಯ, ವ್ಯಾಖ್ಯಾನಗಳ ತಿಳುವಳಿಕೆ ನೀಡುವುದರೊಂದಿಗೆ, ಒಬ್ಬ ಸಾಧಕನು ವಿನಮ್ರವಾಗಿ ಯೋಗ ಸಾಧನೆಗೆ ಹೊರಟರೆ ಯಾವ ನಿಯಮಗಳನ್ನು ಪಾಲಿಸಬೇಕೆಂಬುದನ್ನು ಬಹಳ ಸ್ಪಷ್ಟವಾಗಿ, ನಿಖರವಾಗಿ ತಿಳಿಸಿದ್ದಾರೆ. ನಾಗರಾಜ ಆರ್. ಸಾಲೊಳ್ಳಿಯವರು ಕೇವಲ ಪುಸ್ತಕಗಳನ್ನು ಓದಿ, ವಿಷಯ ಸಂಗ್ರಹಿಸಿದ್ದಾರೆನ್ನುವುದಕ್ಕಿಂತ ಹೆಚ್ಚಾಗಿ ಸ್ವತಃ ಓದಿ ಅನುಭವಿಸಿ ಅದರ ಫಲಪ್ರಾಪ್ತಿ ರೂಪದಲ್ಲಿ ಇತರರಿಗೂ ಉಪಯುಕ್ತವಾಗಲಿಯೆಂಬ ಕಳಕಳಿ ಅವರಲ್ಲಿದೆ. ಈ ಕೃತಿ ಓದುಗರಿಗೆ ಫಲಪ್ರದ ವಾಗಲಿಯೆಂಬುದು ನನ್ನಿಚ್ಛೆಯಾಗಿದೆ ಎಂದು ಪ್ರೊ. ಶಿವರಾಜ ಪಾಟೀಲ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.